ಕೋಟಿಗೊಬ್ಬ 3 ಟ್ರೈಲರ್​ಗೆ ಥ್ರಿಲ್ ಆದ ರಮ್ಯಾ.. ಸುದೀಪ್​ನ ಯಾರಿಗೆ ಹೋಲಿಸಿದ್ರು ಗೊತ್ತಾ..?

ಇಂದು ಸ್ಯಾಂಡಲ್ ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಟ್ರೈಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ಒಂದು ಕ್ಷಣ ದಂಗಾಗಿರೋದು ಸುಳ್ಳಲ್ಲ. ಯಾಕಂದ್ರೆ ಕೋಟಿಗೊಬ್ಬ 3 ನಲ್ಲಿ ಕಿಚ್ಚ ಸುದೀಪ್ ಮತ್ತಷ್ಟು ಯಂಗ್ ಅಂಡ್ ಎನರ್ಜೆಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

 

ಇನ್ನು ತಮ್ಮ ಗೆಳೆಯ ಕಿಚ್ಚ ಸುದೀಪನ ಕೋಟಿಗೊಬ್ಬ 3 ಟ್ರೈಲರ್ ನೋಡಿ ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಕೂಡ ಥ್ರಿಲ್ ಆಗಿದ್ದಾರೆ. ಸುದೀಪನನ್ನ ಹಾಲಿವುಡ್ ಸಿನಿಮಾನದ ಪಾತ್ರ ಬೆಂಜಮಿನ್ ಬಟನ್​ಗೆ ರಮ್ಯಾ ಹೋಲಿಸಿದ್ದಾರೆ. ಬೆಂಜಮಿನ್ ಬಟನ್​​ಗೆ ಮದುಕನಾಗಿ ಹುಟ್ಟು ಮಗುವಾಗಿ ಕೊನೆಯಾಗುತ್ತಾನೆ. ಅಂತೆಯೇ ಸುದೀಪ್​ಗೂ ಕೂಡ ವಯಸ್ಸು ಕಡಿಮೆಯಾಗುತ್ತಿದೆ ಎಂದಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್​ಗೆ ಇನ್​ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿರುವ ರಮ್ಯಾ ನಿಮಗೇನು ವಯಸ್ಸೇ ಆಗಲ್ವೇ ಎಂದು ಕೇಳಿದ್ದಾರೆ.

News First Live Kannada

Leave a comment

Your email address will not be published. Required fields are marked *