‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ | Here is Why Kichcha Sudeep Kotigobba 3 Not Releasing on October 14

‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ

ಸೂರಪ್ಪ ಬಾಬು-ಸುದೀಪ್​

ಇಂದು ಗಾಂಧಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಿಚ್ಚ ಸುದೀಪ್​ ಅಭಿಮಾನಿಗಳು ‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್​ಗಾಗಿ ಕಾದು ಕೂತಿದ್ದರು. ದೊಡ್ಡದೊಡ್ಡ ಕಟೌಟ್​ ರೆಡಿ ಮಾಡಿಟ್ಟುಕೊಂಡಿದ್ದರು. ಹಾಲಿನ ಅಭಿಷೇಕಕ್ಕೂ ಸಿದ್ಧತೆ ನಡೆದಿತ್ತು. ಆದರೆ, ಒಂದೊಂದೇ ಶೋಗಳು ಕ್ಯಾನ್ಸಲ್​ ಆಗುತ್ತಾ ಬಂದವು.  ಇದು ಸುದೀಪ್​ ಅಭಿಮಾನಿಗಳಿಗೆ ಕೋಪ ತರಿಸಿದೆ. ನಾಳೆಯಿಂದ ಶೋ ಆರಂಭವಾಗುತ್ತದೆ ಎನ್ನುವ ಸ್ಪಷ್ಟನೆ ಸಿಕ್ಕಿದೆಯಾದರೂ ಅದು ಖಾತ್ರಿ ಇಲ್ಲ. ಹಾಗಾದರೆ, ‘ಕೋಟಿಗೊಬ್ಬ 3’ ಶೋ ಕ್ಯಾನ್ಸಲ್​ ಆಗೋಕೆ ಕಾರಣವೇನು? ಇದಕ್ಕೆ ನಿರ್ಮಾಪಕರು ಕೊಡುತ್ತಿರುವ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಫ್ಯಾನ್ಸ್​​ ಶೋ ಇಲ್ಲ ಅಂದ್ರು

ಮುಂಜಾನೆ 7ಗಂಟೆಗೆ ಫ್ಯಾನ್ಸ್​ ಶೋ ಇತ್ತು. ಅಭಿಮಾನಿಗಳೆಲ್ಲರೂ ಸಿನಿಮಾಗಾಗಿ ಕಾದು ಕೂತಿದ್ದರು. ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡಿಕೊಂಡು ಚಿತ್ರಮಂದಿರದತ್ತ ತೆರಳಿದರು. ಆದರೆ, ಶೋ ನಡೆಯುತ್ತಿಲ್ಲ ಎನ್ನುವ ಉತ್ತರ ಚಿತ್ರಮಂದಿರದವರ ಕಡೆಯಿಂದ ಬಂತು. ಇದಕ್ಕೆ ಕಾರಣವೇನು ಎಂದು ಕೇಳಿದರೆ, ಸಿನಿಮಾಗೆ ಲೈಸೆನ್ಸ್​ ಸಮಸ್ಯೆ ಎಂಬಿತ್ಯಾದಿ ಉತ್ತರ ಬಂತು. ಆದರೆ, ಯಾವುದೇ ಸ್ಪಷ್ಟನೆ ಚಿತ್ರತಂಡದಿಂದ ಸರಿಯಾಗಿ ಸಿಗಲಿಲ್ಲ.

10ಗಂಟೆಯಿಂದ ಸಿನಿಮಾ ಪ್ರಸಾರ ಅಂದ್ರು

9 ಗಂಟೆ ಸುಮಾರಿಗೆ ನಿರ್ಮಾಪಕ ಸೂರಪ್ಪ ಬಾಬು ಕಡೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಬಂತು. ‘ನಾವು ಯಾವುದೇ ಫ್ಯಾನ್ಸ್​ ಶೋ ಇಟ್ಟಿಲ್ಲ. ಸಿನಿಮಾ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ. ಎಂದಿನಂತೆ 10 ಗಂಟೆಗೆ ಶೋ ಆರಂಭವಾಗಲಿದೆ’ ಎಂದು ಸೂರಪ್ಪ ಬಾಬು ತಿಳಿಸದರು. ಅಭಿಮಾನಿಗಳು 11 ಗಂಟೆಗೆ ಚಿತ್ರಮಂದಿರಕ್ಕೆ ತೆರಳಿದರೂ ಸಿನಿಮಾ ರಿಲೀಸ್​ ಆಗಲೇ ಇಲ್ಲ. ಇದು ಅವರಿಗೆ ಮತ್ತೂ ನಿರಾಸೆ ತರಿಸಿತು.

ಈಗ ಹೇಳ್ತಿರೋದೆ ಬೇರೆ

‘ಕನ್ನಡ ಕಲಾಭಿಮಾನಿಗಳಲ್ಲಿ ಹಾಗೂ ಕಿಚ್ಚ ಸುದೀಪ್​ ಅಭಿಮಾನಿಗಳಲ್ಲಿ ಮನವಿ. ವಿತರಕರು ಮಾಡಿದ ಮೋಸದಿಂದ ‘ಕೋಟಿಗೊಬ್ಬ 3’ ರಿಲೀಸ್​ ಮಾಡೋಕೆ ಆಗ್ತಿಲ್ಲ. ಎಂದಿನಂತೆ ಶನಿವಾರದಿಂದ (ಅಕ್ಟೋಬರ್​ 15) ಬೆಳಗ್ಗೆ 6 ಗಂಟೆಯಿಂದ ಶೋ ಪ್ರಸಾರವಾಗಲಿದೆ. ತಾವು ಸಹಕರಿಸಿ. ಸುದೀಪ್​ ಅವರೇ ನಿಮ್ಮ ಬಳಿಯೂ ಕ್ಷಮೆ ಕೇಳುತ್ತೇನೆ. ಈ ಬಗ್ಗೆ ಟ್ವೀಟ್​ ಮಾಡಿ’ ಎಂದಿದ್ದಾರೆ ಸೂರಪ್ಪ ಬಾಬು.

ಇದನ್ನೂ ಓದಿ: Salaga Movie: ‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​; ದುನಿಯಾ ವಿಜಯ್​ ಸಿನಿಮಾದಲ್ಲಿ ಇಂಟರ್​ವಲ್​ ತನಕ ಏನುಂಟು ಏನಿಲ್ಲ?

Kotigobba 3: ಇಂದು ಬಿಡುಗಡೆಯಾಗುತ್ತಿಲ್ಲ ‘ಕೋಟಿಗೊಬ್ಬ 3’; ಇನ್ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ

TV9 Kannada

Leave a comment

Your email address will not be published. Required fields are marked *