ಕೋಟಿ ಒಡೆಯನನ್ನ ಸೋಲಿಸಿದ ಮನೆ ಕೆಲಸದಾಕೆ.. ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು

ಕೋಟಿ ಒಡೆಯನನ್ನ ಸೋಲಿಸಿದ ಮನೆ ಕೆಲಸದಾಕೆ.. ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು

ಕೊಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ.. ಟಿಎಂಸಿ 218 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, ಬಿಜೆಪಿ 71 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಸಾಲ್ತೋರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನೆಗೆಲಸ ಮಾಡಿಕೊಂಡಿದ್ದ ಚಂದನಾ ಬೌರಿ ಕೋಟ್ಯಾಧಿಪತಿ ಎದುರಾಳಿಯನ್ನ ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ.

ಚಂದನಾ ಬೌರಿ ಒಟ್ಟು 91,648 ಮತಗಳನ್ನ ಪಡೆದು 87503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4,145 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಚಂದನಾ ಬೌರಿ ದಿನಗೂಲಿ ಕಾರ್ಮಿಕನೋರ್ವನ ಪತ್ನಿಯಾಗಿದ್ದು ಇವರು ಮನೆ ಗೆಲಸ ಮಾಡುವ ಮೂಲಕ ಮೂರು ಹೊತ್ತಿನ ಊಟ ಸಂಪಾದಿಸುತ್ತಿದ್ದರು. ಬಾಂಕೂರಾ ಜಿಲ್ಲೆಯ ಸಾಲ್​ತೋರಾ ಎಸ್​ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಚಂದನಾ ಬೌರಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು.

ಇದನ್ನೂ ಓದಿ: ಪ. ಬಂಗಾಳ ಚುನಾವಣೆ: ದಿನಗೂಲಿ ಕಾರ್ಮಿಕನ ಪತ್ನಿಗೆ ಟಿಕೆಟ್ ಕೊಟ್ಟ ಬಿಜೆಪಿ

ಚಂದನಾ ಬೌರಿ 10 ನೇ ತರಗತಿ ಪಾಸ್ ಆಗಿದ್ದು ಅವರ ದಿನದ ಆದಾಯ ಕೇವಲ ₹400 ಮಾತ್ರ. ಅವರ ಬ್ಯಾಂಕ್​ ಖಾತೆಯಲ್ಲಿ 31,985 ರೂ ಹಣವಿರುವುದು ಬಿಟ್ಟರೆ ಮೂರು ಮೇಕೆ, ತಂದೆಯಿಂದ ಬಳುವಳಿಯಾಗಿ ಬಂದ 3 ಹಸು, ಒಂದು ಮಣ್ಣಿನ ಮನೆಯಷ್ಟೇ ಚಂದನಾ ಬೌರಿಯವರ ಆಸ್ತಿ.

ಇನ್ನು ಚಂದನಾ ಬೌರಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದು ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ಒಟ್ಟು ಆಸ್ತಿ 2.7 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಸಂತೋಷ್ ಕುಮಾರ್ ಸ್ವಂತ ಕ್ರಷರ್ ಹೊಂದಿದ್ದಾರೆ ಎನ್ನಲಾಗಿದೆ. ದಿನಗೂಲಿ ಕಾರ್ಮಿಕನ ವ್ಯಕ್ತಿಯ ಪತ್ನಿ ಕೋಟ್ಯಾಧಿಪತಿಯ ವಿರುದ್ಧ ಗೆಲುವು ಸಾಧಿಸಿರುವುದು ಅಪರೂಪದಲ್ಲಿ ಅಪರೂಪ.

The post ಕೋಟಿ ಒಡೆಯನನ್ನ ಸೋಲಿಸಿದ ಮನೆ ಕೆಲಸದಾಕೆ.. ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು appeared first on News First Kannada.

Source: newsfirstlive.com

Source link