ಕೋಟಿ ಕುಬೇರ ರುದ್ರೇಶಪ್ಪನಿಗೆ ಜೈಲೇ ಗತಿ; ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ | Rudreshappa Bail petition ACB Raid Corruption Case Karnataka News


ಕೋಟಿ ಕುಬೇರ ರುದ್ರೇಶಪ್ಪನಿಗೆ ಜೈಲೇ ಗತಿ; ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ಟಿ.ಎಸ್.ರುದ್ರೇಶಪ್ಪ

ಶಿವಮೊಗ್ಗ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಗದಗ ಇಲ್ಲಿನ ಟಿ.ಎಸ್ ರುದ್ರೇಶಪ್ಪ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರುದ್ರೇಶಪ್ಪರಿಗೆ ಮತ್ತೆ ಜೈಲೇ ಗತಿ ಎಂಬಂತಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿ ಆದೇಶ ನೀಡಲಾಗಿದೆ. ಸರ್ಕಾರಿ ಅಭಿಯೋಜಕರು ತಕರಾರು ಅರ್ಜಿ ಸಲ್ಲಿಸದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಒಂದನೇ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ​​ ಅವರನ್ನು ಎಸಿಬಿ ವಶಕ್ಕೆ ಪಡೆದುಕೊಂಡಿತ್ತು. ಶಿವಮೊಗ್ಗದ ಚಾಲುಕ್ಯನಗರ ನಿವಾಸದಲ್ಲಿ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪರನ್ನು ವಶಕ್ಕೆ ಪಡೆಯಲಾಗಿತ್ತು. ರುದ್ರೇಶಪ್ಪ​ಗೆ ಸೇರಿದ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಿನ್ನೆಲೆ ಅಲ್ಲದೆ, ಶಿವಮೊಗ್ಗದ ಚಾಲುಕ್ಯನಗರ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಗಟ್ಟಿ ಬಂಗಾರ ಪತ್ತೆ ಆಗಿತ್ತು. ಗಟ್ಟಿ ಬಂಗಾರ ಸಂಗ್ರಹಿಸಿಡುವುದು ಕಾನೂನು ಬಾಹಿರ. ಈ ಕಾರಣದಿಂದ ಎಸಿಬಿ ಎಸ್​ಪಿ ಜಯಪ್ರಕಾಶ್ ನೇತೃತ್ವದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ನಡೆದ ಎಸಿಬಿ ದಾಳಿಯ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿತ್ತು. ರುದ್ರೇಶಪ್ಪ ಮನೆಯಲ್ಲಿ 15 ಲಕ್ಷ 94 ಸಾವಿರ ನಗದು ಪತ್ತೆ ಆಗಿತ್ತು. ಶಿವಮೊಗ್ಗ ನಗರದಲ್ಲಿ 2 ವಾಸದ ಮನೆ, ವಿವಿಧೆಡೆ 4 ನಿವೇಶನ ಇರುವುದು ತಿಳಿದುಬಂದಿತ್ತು. 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೆಟ್, ಆಭರಣಗಳು ಪತ್ತೆಯಾಗಿತ್ತು. 3 ಕೆಜಿ ಬೆಳ್ಳಿ ವಸ್ತುಗಳು, 2 ವಿವಿಧ ಕಂಪನಿಗಳ ಕಾರುಗಳು, 3 ದ್ವಿಚಕ್ರ ವಾಹನ, 8 ಎಕರೆ ಕೃಷಿ ಜಮೀನು, 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ ಆಗಿತ್ತು.

ರಾಜಧಾನಿ ಬೆಂಗಳೂರು ಸೇರಿದಂತೆ 68 ಕಡೆ ಎಸಿಬಿ ದಾಳಿ ನಡೆಸಿತ್ತು. 408 ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. 15 ಸರ್ಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ, ಅಪಾರ ಪ್ರಮಾಣದ ಆಸ್ತಿ ದಾಖಲೆ, ಚಿನ್ನಾಭರಣ ಪತ್ತೆ ಆಗಿತ್ತು. ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವುದು ಪತ್ತೆಯಾಗಿತ್ತು.

ಇದನ್ನೂ ಓದಿ: ತಿಂಗಳ ಹಿಂದೆಯೇ ಬಾಡಿಗೆ ಕೇಳುವ ನೆಪದಲ್ಲಿ ‘ಲಂಚ ಕೃಷಿಕ’ ರುದ್ರೇಶಪ್ಪ ಮನೆ ಕದ ತಟ್ಟಿದ್ದ ಎಸಿಬಿ ಅಧಿಕಾರಿಗಳು! ಆಗ ಏನಾಯಿತು?

ಇದನ್ನೂ ಓದಿ: ಎಸಿಬಿ ಭರ್ಜರಿ ದಾಳಿ: ಭ್ರಷ್ಟರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಫಿಕ್ಸ್, ಜೈಲು ಶಿಕ್ಷೆ ಆಗಬಹುದಾ? ಒಂದು ಪಕ್ಷಿನೋಟ

TV9 Kannada


Leave a Reply

Your email address will not be published. Required fields are marked *