ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್, ಕೆಲ ಸ್ಟಾರ್ ಆಟಗಾರರಿಗೆ ಅನ್​ಲಕ್ಕಿ ಸೀಸನ್​ ಆಗಿತ್ತು. ಒಂದೆಡೆ ಸೂಪರ್​ ಸ್ಟಾರ್ ಆಟಗಾರರ ಫ್ಲಾಪ್ ಶೋ.. ಮತ್ತೊಂದೆಡೆ ಕೋಟಿ ವೀರರು ತಂಡದಲ್ಲಿದ್ರೂ, ಪ್ಲೇಯಿಂಗ್​​ ಇಲೆವೆನ್​​ನಲ್ಲಿ ಆಡಲು ಅವಕಾಶ ಪಡೆಯಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಾಗಾದ್ರೆ ಆ ಆಟಗಾರರು ಯಾರು..?

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಲ್ಲಿ ಅವಕಾಶಕ್ಕಾಗಿ, ಸ್ಟಾರ್ ಆಟಗಾರರು ಕಾದು ಕುಳಿತಿದ್ರು. ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲಾದ ಈ ಆಟಗಾರರು, ಫ್ರಾಂಚೈಸಿಗಳ ಪರ ಒಂದೇ ಒಂದು ಪಂದ್ಯವನ್ನ ಆಡಲಿಲ್ಲ. ಟೂರ್ನಿಯ ಎಲ್ಲಾ 29 ಪಂದ್ಯಗಳಲ್ಲೂ ಬೆಂಚ್ ಕಾದಿದ್ದ ಸ್ಟಾರ್ ಆಟಗಾರರು, ನಿರಾಸೆಯಿಂದಲೇ ಟೂರ್ನಿಗೆ ಗುಡ್​​ಬೈ ಹೇಳಿದ್ದಾರೆ.

ಕೋಟಿ ವೀರ ಕೆ.ಗೌತಮ್​ಗೆ ಸಿಗಲಿಲ್ಲ ಚಾನ್ಸ್​…!

ಕರ್ನಾಟಕ ಆಲ್​ರೌಂಡರ್ ಕೃಷ್ಣಪ್ಪ ಗೌತಮ್, 9.25 ಕೋಟಿ ರೂಪಾಯಿಗೆ ಚೆನ್ನೈ ಸೂಪರ್​ಕಿಂಗ್ಸ್​ ತಂಡಕ್ಕೆ ಸೇಲಾದ್ರು. ದುಬಾರಿ ಅನ್​ಕ್ಯಾಪ್ಟ್ ಇಂಡಿಯನ್ ಪ್ಲೇಯರ್ ಎನಿಸಿಕೊಂಡ ಗೌತಮ್, ಅವಕಾಶಕ್ಕಾಗಿ ಕಾದು ಕಾದು ಸುಸ್ತಾದ್ರು. ಆಶ್ಚರ್ಯ ಅಂದ್ರೆ, ದಾಖಲೆಯ ಮೊತ್ತಕ್ಕೆ ಕನ್ನಡಿಗನನ್ನ ಖರೀದಿಸಿದ ಚೆನ್ನೈ ಕಿಂಗ್ಸ್​, ಈ ಆಲ್​ರೌಂಡರ್​ನನ್ನ ನೆಟ್​ ಬೌಲರ್​ ಆಗಿ ಮಾತ್ರ ಬಳಿಸಿಕೊಂಡಿತು.  ​

ಉತ್ತಪ್ಪ ಕಮ್​ಬ್ಯಾಕ್​ಗೆ ವೇದಿಯಾಗಲಿಲ್ಲ ಐಪಿಎಲ್..!

ಕರ್ನಾಟಕದ ಮತ್ತೋರ್ವ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ, ಈ ಬಾರಿ ಐಪಿಎಲ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ರು. ರಾಜಸ್ಥಾನ್ ರಾಯಲ್ಸ್​ನಿಂದ ಉತ್ತಪ್ಪರನ್ನ ಟ್ರೇಡ್​​ ಮಾಡಿದ ಚೆನ್ನೈ ಕಿಂಗ್ಸ್​, ಒಂದೇ ಒಂದು ಅವಕಾಶ ನೀಡಲಿಲ್ಲ. ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಉತ್ತಪ್ಪ, ಐಪಿಎಲ್​​ರನ್ನ ವೇದಿಯಾಗಿ ಬಳಸಿಕೊಳ್ಳಲು ಮುಂದಾಗಿದ್ರು. ಆದ್ರೆ ಸಿಎಸ್​ಕೆ ಟೀಮ್ ಮ್ಯಾನೇಜ್​ಮೆಂಟ್, ರಾಬಿನ್​ಗೆ ನಿರಾಸೆ ಮೂಡಿಸಿತು.

ಕೇರಳ ಬ್ಯಾಟ್ಸ್​ಮನ್​​ ಅಜರುದ್ದಿನ್​ಗೆ ಇಲ್ಲ ಅದೃಷ್ಟ..!

ವಾಂಖೆಡೆ ಸ್ಟೇಡಿಯಮ್​​ನಲ್ಲಿ ನಡೆದ ಸೈಯ್ಯದ್ ಮುಶ್ತಾಕ್ ಅಲಿ ಟಿ-ಟ್ವೆಂಟಿ ಟೂರ್ನಿಯಲ್ಲಿ, ಕೇರಳ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದಿನ್ ದಾಖಲೆ ನಿರ್ಮಿಸಿದ್ರು. ಮುಂಬೈ ವಿರುದ್ಧ ಕೇವಲ 37 ಬಾಲ್​ಗಳಲ್ಲಿ ಶತಕ ಸಿಡಿಸಿದ್ದ ಅಜರುದ್ದಿನ್, 20 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾಗಿದ್ರು. ಐಪಿಎಲ್​ನಲ್ಲೂ ತನ್ನ ಟ್ಯಾಲೆಂಟ್ ತೋರಿಸಲು ತುದಿಗಾಲಲ್ಲಿ ನಿಂತಿದ್ದ ಅಜರುದ್ದಿನ್, ಅವಕಾಶವಿಲ್ಲದೆ ಟೂರ್ನಿಯಿಂದ ಹೊರನಡೆದ್ರು.

ಚೈನಾಮನ್​ ಕುಲ್ದೀಪ್​ರನ್ನ ಮರೆತುಬಿಟ್ರಾ ನೈಟ್​ರೈಡರ್ಸ್..!​

ವೈಟ್​ಬಾಲ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಮ್ಯಾಜಿಕ್ ಸ್ಪಿನ್ನರ್​ ಎನಿಸಿಕೊಂಡಿದ್ದ ಕುಲ್ದೀಪ್ ಯಾದವ್, ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾದ್ರು. ಮ್ಯಾಚ್ ಪ್ರಾಕ್ಟೀನ್ ಇಲ್ಲದ ಕುಲ್ದೀಪ್.. ಮಿಸ್ಟ್ರಿ ಸ್ಪಿನ್ನರ್​ ವರುಣ್ ಚಕ್ರವರ್ತಿ ಮತ್ತು ಸುನೀಲ್ ನರೈನ್ ಉಪಸ್ಥಿತಿಯಲ್ಲಿ ಕಳೆದೇ ಹೋದ್ರು.

ಸೀನಿಯರ್ ಚಾವ್ಲಾರನ್ನ ಸೈಡ್ ಹೊಡೆದ ಚಹರ್​​​​..!

2020ರ ಐಪಿಎಲ್ ಸೀಸನ್​ನಲ್ಲಿ ಚೆನ್ನೈ ತಂಡವನ್ನ ಪ್ರತಿನಿಧಿಸಿದ್ದ ಲೆಗ್​ಸ್ಪಿನ್ನರ್​ ಪಿಯೂಷ್ ಚಾವ್ಲಾ, 2.40 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ರು.  ಐಪಿಎಲ್​​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್​ ಎನಿಸಿಕೊಂಡಿದ್ದ ಚಾವ್ಲಾ, ಮುಂಬೈ ಪರ ಒಂದೇ ಒಂದು ಪಂದ್ಯವನ್ನಾಡಲಿಲ್ಲ. ಕಲರ್​ಫುಲ್ ಟೂರ್ನಿಯಲ್ಲಿ ಚಾವ್ಲಾ, ತಮ್ಮ ಗೂಗ್ಲಿ ಚಮತ್ಕಾರ ತೋರಿಸಲು ಸಾಧ್ಯವಾಗಲಿಲ್ಲ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಉಮೇಶ್ ಯಾದವ್, ಸಿಎಸ್​ಕೆ ಬ್ಯಾಟ್ಸ್​ಮನ್  ಚೆತೇಶ್ವರ್ ಪೂಜಾರಾ, ಪಂಜಾಬ್​ ಆಲ್​ರೌಂಡರ್, ಜಲಜ್ ಸಕ್ಸೇನಾ, ಕೆಕೆಆರ್​ ಬ್ಯಾಟ್ಸ್​ಮನ್ ಕರುಣ್ ನಾಯರ್, ಜೇಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್​ರಂತಹ ಟ್ಯಾಲೆಂಟೆಡ್​ ಪ್ಲೇಯರ್ಸ್​ಗೂ ಚಾನ್ಸ್​ ಸಿಗದೇ ಇರೋದು, ಭಾರೀ ನಿರಾಸೆ ಮೂಡಿಸಿದೆ.

The post ಕೋಟಿ ಕೋಟಿಗೆ ಸೇಲ್​ ಆದ್ರೂ ಸಿಗಲಿಲ್ಲ ಚಾನ್ಸ್.. ಬೆಂಚ್ ಕಾದ ಪ್ಲೇಯರ್ಸ್ ಇವರು appeared first on News First Kannada.

Source: newsfirstlive.com

Source link