ಇದೇ ತಿಂಗಳ 31 ನೇ ತಾರೀಖು ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಅರ್ಜುನ್ ಗೌಡ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಿವರಾಜ್ ಕುಮಾರ್, ನಿರ್ಮಾಪಕ ರಾಮು ಅವರನ್ನು ನೆನದು ತುಂಬಾ ಭಾವುಕಾರಾಗಿದ್ದಾರೆ.
ರಾಮು ಅಂತ ನಿರ್ಮಾಪಕನನ್ನು ನಾನು ಇವತ್ತಿನವರೆಗೂ ನೋಡಲೇ ಇಲ್ಲ. ಸಿಂಹದ ಮರಿ ಸಿನಿಮಾದ ಶೂಟಿಂಗ್ ಮಾಡುವಾಗ ಒಬ್ಬ ಕ್ಯಾಮರಾ ಮ್ಯಾನ್ ಸಾವನ್ನಪ್ಪುತ್ತಾರೆ. ಆಗ ರಾಮು ನನಗೆ ಕಾಲ್ ಮಾಡಿ ಕೇಳುತ್ತಾರೆ. ಸಾರ್ ನೀವು ಶೂಟಿಂಗ್ ಮಾಡು ಅಂದ್ರೆ ಮಾಡುತ್ತೇನೆ ಇಲ್ಲ ಅಂದ್ರೆ ಇಲ್ಲ. ಆಗ ನಾನು ಬೇಡ ರಾಮು ಮಾಡೋಣ ಅಂತ ಹೇಳದಾಗ ಆ ಸಿನಿಮಾ ಮಾಡ್ತೀವಿ. ಸಿಂಹದ ಮರಿ ಸಿನಿಮಾ ಸೂಪರ್ ಹಿಟ್ ಆಯ್ತು .
ಅದಾದ ನಂತರ ನನ್ನ ಸಿನಿಮಾ ಜೀವನದ 50 ನೇ ಸಿನಿಮಾ ಏಕೆ 47 ಸಿನಿಮಾವನ್ನು ಕೂಡ ರಾಮುನೇ ನಿರ್ಮಾಣ ಮಾಡಿದ್ದರು. ಆ ಸಿನಿಮಾವನ್ನು ನೋಡಿದ ಡಾ. ರಾಜ್ಕುಮಾರ್ ರಾಮು ಅಂತ ನಿರ್ಮಾಪಕ ಕನ್ನಡದಲ್ಲಿ ಇನ್ನೂ ನೂರಾರು ವರ್ಷಗಳ ಕಾಲ ಇರಬೇಕು ಅಂತ ಆಶೀರ್ವಾದ ಮಾಡಿದ್ದರು. ಏಕೆ 47 ಸಿನಿಮಾ ಕನ್ನಡದ ಮೊಟ್ಟ ಮೊದಲ ಡಿಟಿಎಸ್ ಸೌಂಡ್ ಸಿನಿಮಾ. ಮತ್ತು ಏಕೆ 47 ಸಿನಿಮಾದ ಮೊಟ್ಟ ಮೊದಲ ‘ವಿನಾಯ್ಡ್’ ಪೋಸ್ಟರ್ ಮಾಡ್ಸೋಣಾ ಅಂತ ಕೇಳಿದ್ದೆ ಆಗ ಅವರು ಮಾಡಿಸಿದ್ದರು. ಆ ಪೋಸ್ಟರ್ ಅನ್ನ ಅಪ್ಪಾಜಿ ದಿನಕ್ಕೆ 10 ಸಲ ನೋಡ್ತಾ ಇದ್ರು. ಆದ್ರೆ ಇಂದು ರಾಮು ನಮ್ಮ ಜೊತೆ ಇಲ್ಲ ಅನ್ನೋದೆ ಕಷ್ಟ.
ಇನ್ನೂ ಇದೇ ಸಂದರ್ಭದಲ್ಲಿ ಅಪ್ಪು ಬಗ್ಗೆ ಮಾತನಾಡಿದ ಶಿವಣ್ಣ, ರಾಮು ನಿಧನರಾದಾಗಿಂದ ನಾನು ಮಾಲಾಶ್ರೀ ಅವರನ್ನ ಮಾತಾಡ್ಸಿರಲಿಲ್ಲ. ಯಾಕಂದ್ರೆ ಮಾತಾಡ್ಸುದ್ರೆ ನಾನು ಎಲ್ಲಿ ಅಳ್ತೀನೋ ಅಂತಾ ಭಯ ಆಗಿ ಮಾತಾಡ್ಸಿರಲಿಲ್ಲ. ಅಪ್ಪು ನಿಧನರಾದಾಗ ಮಾಲಾಶ್ರೀನ ನೋಡಿ ನನಗೆ ಇನ್ನು ದುಖಃ ಆಯ್ತು ಅಂತ ಶಿವಣ್ಣ ತುಂಬಾ ಭಾವುಕಾರಾಗಿ ಮಾತನಾಡಿದ್ದಾರೆ.