ಬೆಂಗಳೂರು: ಕನ್ನಡದ ನಿರ್ಮಾಪಕರಲ್ಲಿ ಕೋಟಿ ರಾಮು ಬಹಳ ಸೌಜನ್ಯದ ನಿರ್ಮಾಪಕರಾಗಿದ್ದರು. ಅಂತಹ ನಿರ್ಮಾಪಕರನ್ನು ಕಳೆದುಕೊಂಡಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಹಿರಿಯ ನಟ ದೊಡ್ಡಣ್ಣ ಸಂತಾಪ ಸೂಚಿಸಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಯುವ ನಿರ್ಮಾಪಕರ ಪಡೆಯಲ್ಲಿ ರಾಮು ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ 53ನೇ ವಯಸ್ಸಿಗೆ ಅವರು ಕೊರೊನಾದಿಂದ ಸಾವನ್ನಪ್ಪಿರುವುದು ನನಗೆ ಶಾಕ್​ ನೀಡಿದೆ. ಇದು ಯಾರಿಗೂ ಸಾಯುವ ವಯಸ್ಸು ಅಲ್ಲ. ಅವರ ನಿರ್ಮಾಣದ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದು, ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ನಿರ್ಮಿಸಿದ್ದರು. ನಮಗೆ ನಿರ್ಮಾಪಕ ಎಂದರೆ ಅನ್ನದಾತ.. ಅಂತಹ ನಿರ್ಮಾಪಕರನ್ನು ಕಳೆದುಕೊಂಡಿದ್ದು ಸಾಕಷ್ಟು ನೋವು ಕೊಡುತ್ತಿದೆ ಎಂದು ಭಾವುಕರಾದರು.

ಇದನ್ನೂ ಓದಿ: ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಕೊರೊನಾದಿಂದ ಸಾವು

ಇದನ್ನೂ ಓದಿ: ರಾಮು ಅವರು ರಾಜಕುಮಾರ ಟೈಟಲ್ಲನ್ನ ನನಗೋಸ್ಕರ ಬಿಟ್ಟುಕೊಟ್ಟಿದ್ರು- ಪುನೀತ್ ರಾಜ್​ಕುಮಾರ್

The post ಕೋಟಿ ರಾಮು ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ- ಹಿರಿಯ ನಟ ದೊಡ್ಡಣ್ಣ appeared first on News First Kannada.

Source: News First Kannada
Read More