ಚಿತ್ರದುರ್ಗ: ಜಿಲ್ಲೆಯಲ್ಲಿ ವಾನರ ಸೇನೆಯ ಗ್ಯಾಂಗ್ ವಾರ್ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ನಗರದ ಏಳುಸುತ್ತಿನ ಕೋಟೆ ಬಳಿ ಮಂಗಗಳ ಎರಡು ಗುಂಪುಗಳ ನಡುವೆ ತೀವ್ರ ಕದನ ನಡೆದಿದೆ. ಈ ದೃಶ್ಯವನ್ನ ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಬೇರೆಡೆಯಿಂದ ಬಂದಿದ್ದ ವಾನರ ಗುಂಪಿನ ಜೊತೆ ಮತ್ತೊಂದು ಕೋತಿಗಳ ಗುಂಪು ಕಾದಾಡಿದೆ ಎನ್ನಲಾಗಿದೆ. ಲಾಕ್​​ಡೌನ್​ನಿಂದಾಗಿ ಪ್ರವಾಸಿಗರು ಬಾರದ ಕಾರಣ ಆಹಾರವಿಲ್ಲದೆ ಕೋತಿಗಳು ಕಂಗಾಲಾಗಿವೆ. ಇದೇ ವೇಳೆ ಆಹಾರ ಅರಸಿ ಬಂದ ಮಂಗಗಳ ಗುಂಪುಗಳ ನಡುವೆ ಫೈಟ್ ನಡೆದಿದೆ.

ಕೋತಿಗಳ ಕಾದಾಟದ ವೇಳೆ ಒಂದು ಕೋತಿಗೆ ತೀವ್ರ ಪೆಟ್ಟು ಬಿದ್ದು, ಗಂಭೀರವಾಗಿ ಗಾಯಗೊಂಡಿದೆ. ಕೋತಿಗಳ ಗ್ಯಾಂಗ್ ವಾರ್  ಸ್ಥಳೀಯರು ದಂಗಾಗಿದ್ದಾರೆ.

 

The post ಕೋಟೆನಾಡಲ್ಲಿ ಕೋತಿಗಳ ಗ್ಯಾಂಗ್ ವಾರ್, ಬೆಚ್ಚಿಬಿದ್ದ ಸ್ಥಳೀಯರು appeared first on News First Kannada.

Source: newsfirstlive.com

Source link