ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ -ಬರೋಬ್ಬರಿ 26 ಮನೆಗಳು ನೆಲಸಮ

ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ -ಬರೋಬ್ಬರಿ 26 ಮನೆಗಳು ನೆಲಸಮ

ಚಿತ್ರದುರ್ಗ: ಕೋಟೆ ನಾಡಲ್ಲಿ ಮಳೆಯ ಮಹಾ ಅಬ್ಬರ ಮುಂದುವರೆದ ಪರಿಣಾಮ ಮನೆಗಳು ಜಲಾವೃತಗೊಂಡು 26 ಮನೆಗಳು ನೆಲಸಮವಾಗಿವೆ.

ಜಿಲ್ಲೆಯಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು ವರ್ಷಧಾರೆಯ ರೌದ್ರ ನರ್ತನಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಸದುರ್ಗ ತಾಲೂಕಿನ 6, ಮನೆಗಳು ಸಂಪೂರ್ಣ ಜಖಂಗೊಂಡಿದ್ದರೆ, ಚಿತ್ರದುರ್ಗ ತಾಲೂಕಿನಲ್ಲಿ 5 ಮನೆಗಳು, ಚಳ್ಳಕೆರೆ ತಾಲೂಕಿನಲ್ಲಿ 6 ಮನೆಗಳು ಸಂಪೂರ್ಣ ನೆಲಸಮವಾಗಿವೆ.

ಇನ್ನು ಜಿಲ್ಲೆಯ ಹಿರಿಯೂರು, ಮೊಳಕಾಲ್ಮೂರು ಭಾಗಗಳಲ್ಲಿ ಮೂರು ಮನೆಗಳ ಗೋಡೆ ಕುಸಿದಿವೆ ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವದಾಗಿ ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ದೋಣಿ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಚಳ್ಳಕೆರೆ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಜಮೀನಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದು ಮೂರು ಎಕರೆ ಇರುಳ್ಳಿ ಬೆಳೆ ಸಂಪೂರ್ಣ ನಾಶವಾಗಿ ರೈತನನ್ನು ಸಂಕಷ್ಟಕ್ಕೆ ತಳ್ಳಿದೆ.

The post ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ -ಬರೋಬ್ಬರಿ 26 ಮನೆಗಳು ನೆಲಸಮ appeared first on News First Kannada.

Source: newsfirstlive.com

Source link