ಬೆಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಿಮಿಂಗಿಲದ ವಾಂತಿಯಿಂದ ಸೃಷ್ಟಿಯಾದ ಆಂಬರ್ ಗ್ರೀಸ್ ಎಂದು ಕರೆಯಲ್ಪಡುವ ಕಲ್ಲನ್ನ ಸಾಗಿಸುತ್ತಿದ್ದ ಆರೋಪಿಗಳನ್ನ ಸೆರೆಹಿಡಿಯಲಾಗಿದೆ. ಸೈಯದ್ ತಜ್ಮಲ್, ಸಲೀಂ ಪಾಷಾ, ರಫೀಯುಲ್ಲಾ, ಮಾಸಿರ್ ಬಂಧಿತ ಆರೋಪಿಗಳು.

ತಿಮಿಂಗಿಲದ ವಾಂತಿ ಕಾಲಕ್ರಮೇಣ ಕಲ್ಲಿನ ರೂಪ ಪಡೆಯುತ್ತದೆ. ಇದನ್ನ ಪರ್ಫ್ಯೂಮ್, ಔಷಧಿ ಸೇರಿ ಇನ್ನಿತರೆ ಕೆಲಸಗಳಿಗೆ ಬಳಸಲಾಗುತ್ತದೆ. ಸದ್ಯ ಆರೋಪಿಗಳಿಂದ ಆರು ಮುಕ್ಕಾಲು ಕೆ.ಜಿ.ಯ ಆಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1.7 ಕೋಟಿ ಎನ್ನಲಾಗಿದೆ. ಆರೋಪಿಗಳು ಈ ಕಲ್ಲನ್ನ ಕೋಲಾರದ ವ್ಯಕ್ತಿಯಿಂದ ಡೀಲ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಕೆ.ಜಿ. ಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಅಂಬರ್ ಗ್ರೀಸ್..?

ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳು ಮಾತ್ರ ಒಂದು ರೀತಿಯ ದ್ರವವನ್ನು ಹೊರಹಾಕುತ್ತವೆ.. ಈ ತಿಮಿಂಗಿಲಗಳು ಕಾಟ್ಲಾ ಫಿಶ್, ಸ್ಕ್ವಿಡ್ ಫಿಶ್​ಗಳನ್ನ ತಿಂದ ಮೀನಿನ ಮುಳ್ಳುಗಳು ಜೀರ್ಣವಾಗದೆ ಹೊಟ್ಟೆಯಲ್ಲೇ ಉಳಿದುಕೊಂಡಿರುತ್ತವೆ. ನಂತರ ಅದು ಮೇಣದಂತೆ ರಚನೆಗೊಂಡು ಸುಗಂಧದ ಉಂಡೆಯಾಗಿ ರೂಪುಗೊಳ್ಳುತ್ತದೆ.

ತಿಮಿಂಗಿಲದ ಹೊಟ್ಟೆಯಲ್ಲಿ ಕಿರಿಕಿರಿಯಾದಾಗ ಈ ಮೇಣದ ವಸ್ತುವನ್ನ ವಾಂತಿ ಮಾಡುವ ಮೂಲಕ ಹೊರಹಾಕುತ್ತದೆ. ಇದು ಹಗುರವಾಗಿರೋದ್ರಿಂದ ಸಮುದ್ರದಲ್ಲಿ ತೇಲಾಡುತ್ತದೆ. ಇವುಗಳಿಗೆ ಆಂಬರ್ ಗ್ರೀಸ್ ಎಂದು ಕರೆಯಲಾಗುತ್ತದೆ. ಕಾನೂನಿನ ಪ್ರಕಾರ ಇದನ್ನ ಮಾರಾಟ ಮಾಡುವುದಿಲ್ಲ. ಸಂಶೋಧನೆಗೆ ಬಳಸಿಕೊಳ್ಳಲು ಅವಕಾಶವಿದೆ.

The post ಕೋಟ್ಯಂತರ ಮೌಲ್ಯದ ಆಂಬರ್ ಗ್ರೀಸ್ ಸಾಗಿಸುತ್ತಿದ್ದ ಖದೀಮರು ಅಂದರ್; ಆಂಬರ್​ ಗ್ರೀಸ್ ಅಂದ್ರೇನು?! appeared first on News First Kannada.

Source: newsfirstlive.com

Source link