ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಒಡಕು ಮೂಡಿದ್ದು, ಸಂಸ್ಥೆಯ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಮುಷ್ಕರದಿಂದ ಸಾವಿರಾರು ಮಂದಿ ಬೀದಿಗೆ ಬೀಳ್ತಿದ್ದಂತೆ ಸಾರಿಗೆ ನೌಕರರ ಕೂಟದಲ್ಲಿ ಒಳ ಜಗಳ ಶುರುವಾಗಿದೆ. ಗೌರವಾಧ್ಯಕ್ಷ ಮತ್ತು ಅಧ್ಯಕ್ಷರ ಏಕಪಕ್ಷೀಯ ನಿರ್ಧಾರದಿಂದ ಸಾರಿಗೆ ನೌಕರರ ಕೂಟಕ್ಕೆ ರಾಜ್ಯ ಖಜಾಂಚಿ ಜಗದೀಶ್ ರಾಜೀನಾಮೆ ನೀಡಿದ್ದಾರೆ.

ಇವರ ಜೊತೆಗೆ ಪ್ರಧಾನ ಕಾರ್ಯದರ್ಶಿ ಹೆಚ್​​.ಡಿ ನಾಗೇಂದ್ರ, ರಾಜ್ಯ ಪ್ರಚಾರ ಕಾರ್ಯದರ್ಶಿ ಎಸ್.ಪಿ ಚೇತನ್​ ಕೂಡ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ರಾಜ್ಯ ಸಾರಿಗೆ ಕೂಟದ ಹಲವು ಸದಸ್ಯರೂ ಸಹ ರಾಜೀನಾಮೆ ಪರ್ವ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮೂಲಕ ಒಂದೇ ವರ್ಷಕ್ಕೆ ಸಾರಿಗೆ ನೌಕರರ ಒಕ್ಕೂಟದ ಒಗ್ಗಟ್ಟು ಛಿದ್ರವಾಯ್ತಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಸಾರಿಗೆ ನೌಕರರ ಒಕ್ಕೂಟದಲ್ಲಿ ನೌಕರರ ಮಾತಿಗೆ ಕಿಂಚಿತ್ತೂ ಮನ್ನಣೆ ಇಲ್ಲ. ಸಾರಿಗೆ ಸಚಿವರು, ಅಧ್ಯಕ್ಷರು ಮಾತುಕತೆಗೆ ಕರೆದ್ರೂ ಹೋಗದೇ ಧಿಮಾಕು ತೋರಿದ್ದಾರೆ. ಕಾರ್ಮಿಕರ ಭವಿಷ್ಯ ಅತಂತ್ರವಾಗುವ ಧೊರಣೆ ಅನುಸರಿಸಿದ್ದಾರೆ. ಒಬ್ಬ ಅಧ್ಯಕ್ಷ, ಗೌರವಾಧ್ಯಕ್ಷ ತೆಗೆದುಕೊಂಡ ನಿರ್ಧಾರದಿಂದ ಲಕ್ಷಾಂತರ ಜನರ ಬದುಕು ಕಿತ್ತುಕೊಂಡಂತಾಗಿದೆ ಎಂದು ನೌಕರರು ಆರೋಪ ಮಾಡಿದ್ದಾರೆ.

The post ಕೋಡಿಹಳ್ಳಿ ವಿರುದ್ಧ ತಿರುಗಿಬಿದ್ದ ನೌಕರರು; ಸಾರಿಗೆ ಸಿಬ್ಬಂದಿಯಿಂದ ರಾಜೀನಾಮೆ ಪರ್ವ appeared first on News First Kannada.

Source: newsfirstlive.com

Source link