ದಾವಣಗೆರೆ: ಜಿಲ್ಲೆಯಲ್ಲಿ ಭರ್ಜರಿ ಮಳೆ ಹಿನ್ನಲೆ ಕೆರೆ ಕೋಡಿ ಬಿದ್ದು ನೀರಿನ ರಭಸಕ್ಕೆ ಒಮಿನಿ ಕಾರು ಕೊಚ್ಚಿ ಹೋದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದಲ್ಲಿ ನಡೆದಿದೆ.
ವಡ್ನಾಳ್ ಕೆರೆಗೆ ಕೋಡಿ ಬಿದ್ದನ್ನ ನೋಡಲು ಓಮಿನಿ ವಾಹನದಲ್ಲಿ ತೆರಳಿದ್ದ ಮಂಜಪ್ಪ ಎಂಬುವವರು ಹರಿಯುವ ನೀರಿನಲ್ಲಿ ವಾಹನ ತಿರುಗಿಸುವಾಗ ವಾಹನ ನಿಯಂತ್ರಣ ತಪ್ಪಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ವಾಹನ ಉರುಳಿ ಬಿದ್ದ ಪರಿಣಾಮ ಕಿಟಕಿ ಗ್ಲಾಸ್ ಒಡೆದಿದ್ದು ಚಾಲಕ ಪಾರಾಗಿದ್ದಾನೆ. ಬಳಿಕ ಮರದ ದಿಮ್ಮಿಗೆ ವಾಹನ ಡಿಕ್ಕಿ ಹೊಡೆದು ನಿಂತಾಗ ಗ್ರಾಮಸ್ಥರು ಕ್ರೇನ್ ಸಹಾಯದಿಂದ ಓಮಿನಿಯನ್ನು ಮೇಲೆಕ್ಕೆತ್ತಿದ್ದಾರೆ.