ಚಿಕ್ಕಬಳ್ಳಾಪುರ: ಕೆರೆ ನೀರು ನೋಡಲು ಹೋಗಿ ಯುವಕ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ನಡೆದಿದೆ.
ಬೋಯಿಪಲ್ಲಿ ಗ್ರಾಮದ ನಿವಾಸಿ ರಮಣ ಕೆರೆ ನೀರಿನಲ್ಲಿ ಕೊಚ್ಚಿ ಹೋದ ಯುವಕ. ಕೆರೆ ಕೊಡಿ ಬಿದ್ದ ಕಾರಣ ಹರಿಯುತ್ತಿದ್ದ ನೀರು ನೋಡಲು ಐವರು ಸ್ನೇಹಿತರು ಕೆರೆ ಬಳಿ ತೆರಳಿದ್ದರು. ಈ ವೇಳೆ ರಭಸದಿಂದ ಹರಿಯುತ್ತಿದ್ದ ನೀರಿನತ್ತ ಸಾರ್ವಜನಿಕರು ತೆರಳದಂತೆ ಮಾರ್ಗಕ್ಕೆ ಪಟ್ಟಿ ಕಟ್ಟಿದ್ದರು ಲೆಕ್ಕಿಸದೆ ನೀರಿಗೆ ಇಳಿದಿದ್ದ ಐವರು ಯುವಕರು ಕೊಚ್ಚಿ ಹೋಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ನಾಲ್ವರು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ನಾಪತ್ತೆಯಾಗಿರೋ ಮತ್ತೊಬ್ಬ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಪಾತಪಾಳ್ಯಾ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.