ಕೋತಿಗಳಿಗೂ ತಟ್ಟಿದ ಪ್ರವಾಹ ಭೀತಿ: ಆಹಾರಕ್ಕಾಗಿ ಪರದಾಡಿದ ನೂರಕ್ಕೂ ಹೆಚ್ಚು ಕೋತಿಗಳು | Flood threatened for monkeys also: More than a hundred monkeys searching for food


ಕೋತಿಗಳಿಗೂ ತಟ್ಟಿದ ಪ್ರವಾಹ ಭೀತಿ: ಆಹಾರಕ್ಕಾಗಿ ಪರದಾಡಿದ ನೂರಕ್ಕೂ ಹೆಚ್ಚು ಕೋತಿಗಳು

ಕೋತಿಗಳಿಗೂ ತಟ್ಟಿದ ಪ್ರವಾಹ ಭೀತಿ

ನಿರಂತರ ‌ಮಳೆ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆಯಾಗಿದ್ದು, ಕಟಾವಿಗೆ ಬಂದ ಬಾಳೆ ನೆಲಕಚ್ಚಿರುವಂತಹ ಘಟನೆ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನಡೆದಿದೆ. ಅಪಾರ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮಗಳ ಮದುವೆ ಕನಸು ಕಂಡಿದ್ದ ರೈತನ ಕನಸನ್ನು ರಕ್ಕಸ ಮಳೆ ನುಚ್ಚು ನೂರು ಮಾಡಿದೆ.

ದಾವಣಗೆರೆ: ಕೋತಿಗಳಿಗೂ ಪ್ರವಾಹ ಭೀತಿ ತಟ್ಟಿದ್ದು, ಆಹಾರಕ್ಕಾಗಿ ನೂರಕ್ಕೂ ಹೆಚ್ಚು ಕೋತಿಗಳು ಪರದಾಡಿರುವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ಬಳಿ ನಡೆದಿದೆ. ಆಹಾರ ಸಿಗದೇ ಕೋತಿಗಳು ಮರದ ಸೊಪ್ಪು ತಿನ್ನುತ್ತಿವೆ. ನಾಲ್ಕು ದಿನಗಳಿಂದ ಸುರಿದ ಮಳೆಗೆ ಪಿಕ್ ಅಪ್ ಡ್ಯಾಂಗೆ ನೀರು‌ ಹರಿದು ಬಂದಿದ್ದು, ಆಹಾರಕ್ಕಾಗಿ ಸುತ್ತಾಡುತ್ತಿದ್ದ ಕೋತಿಗಳು ಮರದಲ್ಲಿ ಆಸರೆ ಪಡೆದುಕೊಂಡಿವೆ. ಭಾರೀ ಪ್ರಮಾಣದ ನೀರು ನೋಡಿ ಭಯಗೊಂಡು ಕೋತಿಗಳು ಮರವೆರಿ ಕುಳಿತಿವೆ. ಗ್ರಾಮದ ಕಡೆಗೂ ಹೋಗದೇ ಇತ್ತ ಹಳ್ಳ ಸಹ ದಾಟದೇ ಸಂಕಷ್ಟದಲ್ಲಿ ಸಿಲುಕಿವೆ.

ಮಗಳ ಮದುವೆ ಕನಸು ಕಂಡಿದ್ದ ರೈತನ ಕನಸಗಿ ಕೊಳ್ಳಿಯಿಟ್ಟ ರಕ್ಕಸ ಮಳೆ

ಗದಗ: ನಿರಂತರ ‌ಮಳೆ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆಯಾಗಿದ್ದು, ಕಟಾವಿಗೆ ಬಂದ ಬಾಳೆ ನೆಲಕಚ್ಚಿರುವಂತಹ ಘಟನೆ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನಡೆದಿದೆ. ಅಪಾರ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮಗಳ ಮದುವೆ ಕನಸು ಕಂಡಿದ್ದ ರೈತನ ಕನಸನ್ನು ರಕ್ಕಸ ಮಳೆ ನುಚ್ಚು ನೂರು ಮಾಡಿದೆ. ಬಾಳೆ ಬೆಳೆ ಸಂಪೂರ್ಣ ಹಾಳಾಗಿದ್ದು ರೈತನ ಗೋಳಾಟ ಹೇಳತಿರದು. ನಾಗಾವಿ ಗ್ರಾಮದ ನಿಂಗಪ್ಪ ಕಲಕೇರಿ, ಫಕೀರಪ್ಪ ಕುರಿ ಎಂಬ ರೈತರ ಬಾಳೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ತೋಟ ಮಾಡಿದ್ದು, ಸುಮಾರು ನಾಲ್ಕು ಲಕ್ಷ ಲಾಭದ ನಿರೀಕ್ಷೆ ಹೊಂದಿದ್ದ ರೈತ, ಲಾಭದಲ್ಲಿ ಮಗಳ ಮದುವೆ ಮಾಡಿ‌ ಉಳಿದ ಹಣ ಸಾಲ ತೀರಿಸುವ ಕನಸು ಕಂಡಿದ್ದ. ಮಳೆಗೆ ರೈತನ ಕನಸು ಮಣ್ಣು ಪಾಲಾಗಿದ್ದು, ರೈತನ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಉಡಾಫೆ ಉತ್ತರ ನೀಡಿದ್ದಾರೆ. ರೈತರಿಗೆ ಧೈರ್ಯ ಹೇಳಬೇಕಿದ್ದ ಅಧಿಕಾರಿಗಳು ಬಾಳೆ ನೆಲಕ್ಕೆ ಬಿದ್ರೆ ಏನ್ ಮಾಡೋದು ಎಂದು ಬೇಜವಾಬ್ದಾರಿ ವರ್ತನೆ ಮಾಡಿದ್ದಾರೆ. ಅಧಿಕಾರಿಗಳ ವರ್ತನೆಗೆ ರೈತರ ಆಕ್ರೋಶ ವ್ಯಕ್ತಪಡಿಸಿದ್ದು, ಕಷ್ಟ ಪಟ್ಟ ರೈತನ ಬದುಕು ಇಷ್ಟೇನಾ ಅಂತ ಗೋಳಾಡುವಂತ್ತಾಗಿದೆ.

TV9 Kannada


Leave a Reply

Your email address will not be published. Required fields are marked *