ಕೋತಿಯಮ್ಮನೊಂದಿಗೆ ಮರಿಬಾತುಕೋಳಿಗಳು; ಮಕ್ಕಳ ದಿನಾಚರಣೆಗೆ ವಿಶೇಷ ವಿಡಿಯೋ – Bureaucrat Shares Adorable Video On Childrens Day Internet Is All Hearts


Children’s Day : ಮಮತಾಮಯಿಗೆ ಯಾವ ಮಕ್ಕಳಾದರೇನು? ಅದೊಂದು ಅನುಭೂತಿ. ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ.

ಕೋತಿಯಮ್ಮನೊಂದಿಗೆ ಮರಿಬಾತುಕೋಳಿಗಳು; ಮಕ್ಕಳ ದಿನಾಚರಣೆಗೆ ವಿಶೇಷ ವಿಡಿಯೋ

Bureaucrat Shares Adorable Video On Children’s Day.

Viral Video : ಇಂದು ಮಕ್ಕಳ ದಿನಾಚರಣೆ. ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಐದು ಬಾತುಕೋಳಿ ಮರಿಗಳನ್ನು ಕೋತಿಯೊಂದು ತನ್ನ ಮಕ್ಕಳಂತೆಯೇ ಕಾಣುತ್ತಿದೆ. ಎಳೆಹುಲ್ಲಿನ ಮೇಲೆ ಆಟವಾಡುತ್ತ, ನೆಗೆದಾಡುತ್ತ, ಆರಾಮ ತೆಗೆದುಕೊಳ್ಳುತ್ತ ಒಂದಕ್ಕೊಂದು ಎಷ್ಟೊಂದು ಅನ್ಯೋನ್ಯವಾಗಿ ಉಲ್ಲಾಸಮಯವಾಗಿವೆಯಲ್ಲ? ನೋಡಿ ಈ ವಿಡಿಯೋ.

23 ಸೆಕೆಂಡಿನ ಈ ವಿಡಿಯೋ ನಿಮ್ಮನ್ನು ಮುದಗೊಳಿಸದೇ ಇರಲಾರದು. ಈ ತನಕ ಈ ವಿಡಿಯೋ ಅನ್ನು 27,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,700ಕ್ಕಿಂತಲೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಎಂಥ ಅದ್ಭುತವಾದ ದೃಶ್ಯವಿದು. ಇದನ್ನು ಹಂಚಿಕೊಂಡ ನಿಮಗೆ ಧನ್ಯವಾದ ಎಂದಿದ್ದಾರೆ. ಇಂಥ ಮುಗ್ಧ ಜೀವಗಳನ್ನು ಪ್ರಕೃತಿ ಪೊರೆಯಲಿ ಎಂದಿದ್ದಾರ ಎನ್ನೊಬ್ಬರು. ಈ ವಿಡಿಯೋ ಒಂದು ಥೆರಪಿಯಂತೆ ಭಾಸವಾಗುತ್ತಿದೆ. ನೋಡುತ್ತಿದ್ದಂತೆ ಎಂಥ ಆಹ್ಲಾದಕರ ಅನುಭವವಾಗುತ್ತಿದೆ. ಇದನ್ನು ವಿಡಿಯೋ ಮಾಡಿದವರಿಗೆ ಧನ್ಯವಾದ ಎಂದಿದ್ದಾರೆ ಮಗದೊಬ್ಬರು.

ಮಕ್ಕಳ ದಿನದಂದು ನಿಮ್ಮೊಳಗಿನ ಮಗುವಿಗೂ ಮತ್ತು ಮಕ್ಕಳಿಗೂ ಈ ವಿಡಿಯೋ ತೋರಿಸಿ.

TV9 Kannada


Leave a Reply

Your email address will not be published.