ತಮಿಳುನಾಡಿಗೆ ಅನುಕೂಲ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಪಾದಯಾತ್ರೆಗೆ ಬೇಕಾದ ಎಲ್ಲಾ ಮಟಿರಿಯಲ್ಗಳು, ಕಾರ್ಮಿಕರು ತಮಿಳುನಾಡಿನಿಂದ ಬಂದಿರೋದನ್ನ ನಮ್ಮ ಕಾರ್ಯಕರ್ತರು ರೆಕಾರ್ಡ್ ಮಾಡಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಖಂಡಿತವಾಗಿಯೂ ತಮಿಳುನಾಡು ಸ್ಪಾನ್ಸರ್ಶಿಪ್ ಇರಬಹುದು ಎಂದು ಅವರು ಹೇಳಿದ್ದಾರೆ.
ಹಾಗಿದ್ರೆ ಕುಮಾರಸ್ವಾಮಿ ಮಾಡಿದ ಆರೋಪಗಳೇನು?
- ಕಾಂಗ್ರೆಸ್ ಪಾದಯಾತ್ರೆಗೆ ತಮಿಳು ನಾಡು ಸ್ಪಾನ್ಸರ್ಶಿಪ್ ಮಾಡಿರಬಹುದು
- ಮೇಕೆದಾಟು ಯೋಜನೆ ಈಗ ಸುಪ್ರೀಂ ಕೋರ್ಟ್ನಲ್ಲಿ ಇದೆ.. ಹೀಗಾಗಿ ಪ್ರತಿಭಟನೆ ಮಾಡಿ ಕೋರ್ಟ್ನಲ್ಲಿ ತಮಿಳುನಾಡಿಗೆ ಅನುಕೂಲ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇರಬಹುದು.
- ಸಿದ್ದರಾಮಯ್ಯ ಮಾತೆತ್ತಿದರೆ ಅಣ್ಣಾ ಮಲೈ.. ಅಣ್ಣಾ ಮಲೈ ಅಂತಾರೆ.. ಈ ಕಾರ್ಮಿಕರನ್ನು ಬಹುಶಃ ಅಣ್ಣಾಮಲೈ ಅವರಿಂದಲೇ ಸಿದ್ದರಾಮಯ್ಯ ಕರೆಸಿರಬಹುದು..
- ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಸೇರಿ ಕಾಂಗ್ರೆಸ್ ಅಧಿಕಾರದಲ್ಲಿದೆ.. ಹೀಗಾಗಿ, ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಡಿಎಂಕೆ ಜೊತೆ ಒಳ ಒಪ್ಪಂದ ಮಾಡಿಕೊಂಡಿರಬಹುದು..