ಬೆಂಗಳೂರು: ವಿಶೇಷಚೇತನ ನೌಕರರಿಗೆ ಹೈಕೋರ್ಟ್ ಗುಡ್ ನ್ಯೂಸ್ ನೀಡಿದ್ದು, ಲಾಕ್​ಡೌನ್ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿದೆ.

ರಾಜ್ಯದ ಎಲ್ಲಾ ಜಿಲ್ಲಾ ಕೋರ್ಟ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷಚೇತನ ನೌಕರರು, ಸಾಂಕ್ರಾಮಿಕ ಸಮಯದಲ್ಲಿ ಕಚೇರಿಗೆ ಹಾಜರಾಗುವುದು ಕಷ್ಟ. ಹೀಗಾಗಿ ವಿನಾಯಿತಿ ನೀಡಬೇಕೆಂದು ಕೋರಿ ರಾಜ್ಯ ವಿಕಲಚೇತನರ ಹಕ್ಕುಗಳ ಆಯೋಗ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.

ರಾಜ್ಯ ವಿಕಲಚೇತನರ ಹಕ್ಕುಗಳ ಆಯೋಗ ಕಳೆದ ಮೇ.5ರಂದು ಲಿಖಿತವಾಗಿ ಹೈಕೋರ್ಟ್​ಗೆ ಮನವಿ ಮಾಡಿತ್ತು. ವಿಕಲಚೇತನ ನೌಕರರ ಮನವಿಯನ್ನ ಪರಿಗಣಿಸಿದ ಹೈಕೋರ್ಟ್, ಕರ್ತವ್ಯಕ್ಕೆ ಹಾಜರಾಗಲು ವಿನಾಯತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಸ್ ಓಕ ಅವರ ಆದೇಶದ ಮೇರೆಗೆ ಹೈಕೊರ್ಟ್‌ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಅವರು ಕರ್ತವ್ಯಕ್ಕೆ ಹಾಜರಾಗಲು ವಿನಾಯತಿ ನೀಡಿದ್ದಾರೆ.

The post ಕೋರ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರೋ ವಿಶೇಷಚೇತನ ನೌಕರರಿಗೆ ಬಿಗ್ ರಿಲೀಫ್ appeared first on News First Kannada.

Source: newsfirstlive.com

Source link