ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಆಕ್ಸಿಜನ್​ ಸಿಗದ ಹಿನ್ನೆಲೆಯಲ್ಲಿ ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಕೊರೊನಾ ಸೋಂಕಿತರು ತಡರಾತ್ರಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಈ ನಾಲ್ವರು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿದ್ದ ಈ ನಾಲ್ವರಿಗೆ ತಡರಾತ್ರಿ ಉಸಿರಾಟದ ಸಮಸ್ಯೆ ಎದುರಾಗಿದೆ, ಆಕ್ಸಿಜನ್​ ಕೊರತೆಯ ಹಿನ್ನೆಲೆಯಲ್ಲಿ ನಾಲ್ವರೂ ಸಾವನ್ನಪ್ಪಿದ್ದಾರೆ. ರಾತ್ರಿ ಪೋನ್​ ಮಾಡಿದರೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್​ ಮಾತನಾಡಿದ್ದು, ಈಗಾಗಲೇ ಕಾಲ್​ ಸೆಂಟರ್​ ಮಾಡಿ ಆಕ್ಸಿಜನ್​, ರೆಮಿಡಿಸಿವಿರ್​ ನೀಡಲು ಐಎಎಸ್​ ಅಧಿಕಾರಿಯನ್ನ ನೇಮಿಸಲಾಗಿದೆ. ಈ ಬಗ್ಗೆ ಡೆತ್​ ಆಡಿಟ್​ ಬಂದ ಮೇಲೆ ಮಾತನಾಡುತ್ತೇನೆ.  ಸರ್ಕಾರದ ಸ್ಟೋರ್ಸ್‌ನಲ್ಲಿ‌ 26 ಸಾವಿರ ರೆಮಿಡಿಸಿವಿರ್​ ಬೇಕು. ಯಾರಾದರೂ ದುರುದ್ದೇಶದಿಂದ ರೆಮಿಡಿಸಿವಿರ್​ ಸ್ಟಾಕ್​ ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸಿದ್ರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಗೃಹ ಇಲಾಖೆ ಇಂದ ಮನವಿ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

The post ಕೋಲಾರದಲ್ಲಿ ಆಕ್ಸಿಜನ್​​ ಸಿಗದೇ ನಾಲ್ವರು ಕೊರೊನಾ ಸೋಂಕಿತರ ದುರ್ಮರಣ appeared first on News First Kannada.

Source: News First Kannada
Read More