ಕೋಲಾರ: ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕರ್ ಮೈಕೋಸಿಸ್ ಜಿಲ್ಲೆಗೂ ವಕ್ಕರಿಸಿದ್ದು, 12 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಕೊರೊನಾ ಬಂದು ಗುಣಮುಖರಾಗಿದ್ದ 12 ಮಂದಿಯಲ್ಲಿ ಬ್ಲಾಕ್ ಫಂಗಸ್ ಲಕ್ಷಣ ಗೋಚರವಾಗಿದೆ. ಒಟ್ಟು 12 ಜನರ ಪೈಕಿ ಏಳು ಜನರಿಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ನಾಲ್ಕು ಜನರಿಗೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಚಿಕಿತ್ಸೆ ನೀಡಲು ಆಂಪೋರಿಯೋಸಿಸ್ ಬಿ ಇಂಜೆಕ್ಷನ್ ಸಿಗದ ಹಿನ್ನೆಲೆ ವೈದ್ಯರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಆರ್.ಎಲ್.ಜಾಲಪ್ಪ ಆಸ್ಪತ್ರೆ ಡಿಎಸ್ ಹಜೀಮ್ ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಆತಂಕದ ನಡುವೆಯೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವುದು ಜನರ ನಿದ್ದೆಗೆಡಿಸಿದೆ. ಸೂಕ್ತ ಚಿಕಿತ್ಸೆ ಸಹ ಸಿಗುತ್ತಿಲ್ಲ ಹೀಗಾಗಿ ಜನರಲ್ಲಿ ಆತಂಕ ಇನ್ನೂ ಹೆಚ್ಚಿದೆ.

The post ಕೋಲಾರದಲ್ಲಿ 12 ಜನರಿಗೆ ಬ್ಲ್ಯಾಕ್ ಫಂಗಸ್- ಔಷಧಿ ಕೊರತೆಯಿಂದ ವೈದ್ಯರಿಗೆ ತಲೆನೋವು appeared first on Public TV.

Source: publictv.in

Source link