ಕೋಲಾರ: ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್, ಜಿಲ್ಲೆಯ ಖಾಸಗಿ ಆಸ್ಪತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಲಾರದ ಲಕ್ಷ್ಮೀ ಖಾಸಗಿ ಆಸ್ಪತ್ರೆ ವೈದ್ಯರ ಬಗ್ಗೆ ಇರ್ಫಾನ್ ಹೊಗಳಿದ್ದಾರೆ

ಆಸ್ಪತ್ರೆಯ ಡಾ.ಗುಣಶೇಖರ್, ಡಾ.ಜಗಮೋಹನ್ ಹಾಗೂ ಡಾ.ರಾಧ ಅವರ ಕಾರ್ಯವೈಖರಿಯನ್ನ ಇರ್ಫಾನ್ ಪಠಾಣ್ ಶ್ಲಾಘಿಸಿದ್ದು, ಇಲ್ಲಿನ ವೈದ್ಯರು ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಹಲವರ ಪ್ರಾಣಗಳನ್ನು ಉಳಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ‌ ಇವರು ತಮ್ಮ‌ ಕುಟುಂಬಗಳನ್ನು ಮರೆತು ಕೆಲಸ ಮಾಡಿದ್ದಾರೆ ಎಂದು ಪ್ರಶಂಶಿಸಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

The post ಕೋಲಾರದ‌ ಆಸ್ಪತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕ್ರಿಕೆಟಿಗ ಇರ್ಫಾನ್ ಪಠಾಣ್ appeared first on News First Kannada.

Source: newsfirstlive.com

Source link