ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ; ಈವರೆಗೆ 63 ಪೊಲೀಸರಿಗೆ ಸೋಂಕು ದೃಢ | 63 police tested positive for coronavirus in kolar


ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ; ಈವರೆಗೆ 63 ಪೊಲೀಸರಿಗೆ ಸೋಂಕು ದೃಢ

ಪ್ರಾತಿನಿಧಿಕ ಚಿತ್ರ

ಕೋಲಾರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Mekedatu  padayatra) ಸಂದರ್ಭದಲ್ಲಿ ಕೋಲಾರ ಜಿಲ್ಲೆಯಿಂದ ಭದ್ರತೆಗಾಗಿ 160 ಪೊಲೀಸರು ರಾಮನಗರಕ್ಕೆ ತೆರಳಿದ್ದರು. ಈ ಪೈಕಿ ಈವರೆಗೆ 63 ಪೊಲೀಸರಿಗೆ (Police) ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ಕೆಲ ಪೊಲೀಸರ ಕೊವಿಡ್ (covid 19) ಟೆಸ್ಟ್ ರಿಪೋರ್ಟ್​ ಬರಬೇಕಿದ್ದು, ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ನಿನ್ನೆಯವರೆಗೂ ಒಟ್ಟು 32 ಜನ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಇಂದು ಹೊಸದಾಗಿ 31 ಜನ ಪೊಲೀಸರಿಗೆ ಸೋಂಕು ಪತ್ತೆಯಾಗಿದೆ.

ಚಾಮರಾಜನಗರ: ಕೊಳ್ಳೇಗಾಲ ಟೌನ್​ ಠಾಣೆಯ 9 ಪೊಲೀಸರಿಗೆ ಕೊರೊನಾ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಟೌನ್ ಪೊಲೀಸ್​ ಠಾಣೆಯ 9 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವಾರ ಪಿಎಸ್​ಐ, ಕಾನ್ಸ್​ಟೇಬಲ್​ಗೆ ಸೋಂಕು ತಗುಲಿತ್ತು. ಹೀಗಾಗಿ 45 ಸಿಬ್ಬಂದಿಗಳಿಗೆ ಆರ್​ಟಿಪಿಸಿಆರ್​ ಟೆಸ್ಟ್ ಮಾಡಿಸಲಾಗಿತ್ತು. ಸದ್ಯ 45 ಪೊಲೀಸರ ಪೈಕಿ 9 ಪೊಲೀಸರಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *