
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ
ಕೋಲಾರ ತಾಲೂಕು ಕಚೇರಿ ಸಿಬ್ಬಂದಿ ದಾಖಲೆಗಳನ್ನ ನೀಡಿಲ್ಲ ಇದರಿಂದ ಮನನೊಂದ ಕೋಲಾರ ತಾಲೂಕು ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೋಲಾರ: ಜಿಲ್ಲೆಯ ಸರ್ಕಾರಿ ತಾಲೂಕು ಕಚೇರಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯಗೆ ಯತ್ನಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ತನ್ನ ಜಮೀನು ದಾಖಲೆ ನೀಡಲು ಅಧಿಕಾರಿಗಳು ಕಳೆದ 6 ತಿಂಗಳಿನಿಂದ ಪಹಣಿ, ಸೇರಿದಂತೆ ಹಲವು ದಾಖಲೆಗಳನ್ನ ನೀಡದೆ ಸತಾಯಿಸಿದ ಹಿನ್ನೆಲೆ ಇಂದು ಪೆಟ್ರೋಲ್ ಸಮೇತ ತಯಾರಿ ಮಾಡಿಕೊಂಡು ಬಂದಿದ್ದ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೋಲಾರ ತಾಲೂಕು ಕಚೇರಿ ಸಿಬ್ಬಂದಿ ದಾಖಲೆಗಳನ್ನ ನೀಡಿಲ್ಲ ಇದರಿಂದ ಮನನೊಂದ ಕೋಲಾರ ತಾಲೂಕು ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜಮೀನು ಮಾರಾಟ ಮಾಡಲು ಮೂಲ ದಾಖಲಾತಿಗಳನ್ನು ನೀಡದೆ ಆರು ತಿಂಗಳಿಂದ ಸತಾಯಿಸುತ್ತಿದ್ದ ತಾಲೂಕು ಕಚೇರಿ ಸಿಬ್ಬಂದಿಯ ಕ್ರಮಕ್ಕೆ ಬೇಸತ್ತ ರೈತ ಇಂದು ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲೆ ಆತ್ಮಹತ್ಯೆಗೆ ಯತಿಸಿದ್ದಾನೆ. ಇನ್ನೂ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಇದೆ ಆಗಿದ್ದು, ಅಧಿಕಾರಿಗಳಿಗೆ ಹಣ ಕೊಟ್ರೂ ಸಹ ಕೆಲಸ ಮಾಡುತ್ತಿಲ್ಲ.