ಬೆಂಗಳೂರು: ರಾಜ್ಯದಲ್ಲಿ ಸುರಿಯತ್ತಿರುವ ಅಕಾಲಿಕ ಮಳೆ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಕೋಲಾರ ಜಿಲ್ಲೆಗ ಆಗಮಿಸಿ ಅಕಾಲಿಕ ಮಳೆಯಿಂದ ಬೆಳೆಯನ್ನು ಕಳೆದುಕೊಂಡಿರುವ ರೈತರ ಸಂಕಷ್ಟಗಳನ್ನು ಆಲಿಸಿದ್ದಾರೆ.
ತಾಲೂಕಿನ ನರಸಾಪುರ, ಚೌಡದೇನಳ್ಳಿ, ಕಲ್ಪಮಂಜಲಿ ಗ್ರಾಮಗಳಲ್ಲಿ ಮಳೆಯಿಂದ ನಷ್ಟವಾಗಿರುವ ಹೊಲ, ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಕಾಳಿಕ ಮಳೆಗೆ ಮೊಳಕೆ ಒಡೆದಿರುವ ಬೆಳಗಳನ್ನು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸಿಎಂ ಅವರಿಗೆ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಮತ್ತೆ ತಮ್ಮ ಪ್ರವಾಸವನ್ನು ಮುಂದುವರಿದ್ದಾರೆ.
ಇದನ್ನೂ ಓದಿ:ಪುನೀತ್ ಬ್ಯಾನರ್ ಹರಿದವನಿಗೆ ಯುವಕರು ಮಾಡಿದ್ದೇನು ಗೊತ್ತಾ?