ಕೋಲಾರ: ವಂಚನೆ ಪ್ರಕರಣದಲ್ಲಿ ಬಿಟಿಎಂ ಲೇಔಟ್ ಮಾಜಿ ಕಾರ್ಪೊರೇಟರ್ ಬಂಧನ | Former corporator of BTM layout arrested in fraud case in Kolar


ಕೋಲಾರ: ವಂಚನೆ ಪ್ರಕರಣದಲ್ಲಿ ಬಿಟಿಎಂ ಲೇಔಟ್ ಮಾಜಿ ಕಾರ್ಪೊರೇಟರ್ ಬಂಧನ

ದೇವದಾಸ್

ಕೋಲಾರ: ವಂಚನೆ ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಬಿಟಿಎಂ ಲೇಔಟ್(BTM Layout) ಮಾಜಿ ಕಾರ್ಪೊರೇಟರ್​ ಅನ್ನು ಬಂಧಿಸಲಾಗಿದೆ. ಮದನಪಲ್ಲಿ ಪೊಲೀಸರು(Karnataka police) ಮಾಜಿ ಕಾರ್ಪೊರೇಟರ್ ದೇವದಾಸ್ ಅವನ್ನು ಬಂಧಿಸಲಾಗಿದೆ(Arrest). ಸರ್ಕಾರಿ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ಮದನಪಲ್ಲಿ ಶಾಸಕ ಮಹಮದ್  ನವಾಜ್ ಬಾಷರಿಂದ ಹಣ ಪಡೆದಿದ್ದ ದೇವದಾಸ್ ಅವರ ವಿರುದ್ಧ ಕೇಸ್​ ದಾಖಲಾಗಿದ್ದು, ಇಂದು (ಫೆಬ್ರವರಿ 14) ಪೊಲೀಸರು ಬಂಧಿಸಿದ್ದಾರೆ.

ಒಂದು ಕೋಟಿ ರೂಪಾಯಿ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ದೇವದಾಸ್, ಹಣ ಪಡೆದ ಬಳಿಕ ಯಾವುದೇ ಜಮೀನು ಕೊಡಿಸಿರಲಿಲ್ಲ. ಹೀಗಾಗಿ ಶಾಸಕ ಮಹಮದ್ ನವಾಜ್ ಬಾಷ ದೂರು ನೀಡಿದ್ದರು. ಆದ್ದರಿಂದ ಇಂದು ಬೆಳಗ್ಗೆ ಮದನಪಲ್ಲಿ ಪೊಲೀಸರು ದೇವದಾಸ್ ಅವರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ದೇವದಾಸ್ ಕಾರ್ ಸೀಜ್ ಮಾಡಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಸದ್ಯ ದೇವದಾಸ್ ಅವರನ್ನು ಇರಿಸಲಾಗಿದೆ.


Leave a Reply

Your email address will not be published.