ಕೋಲಾರ: ಹಿಂದೂ ಸಂಘಟನೆಗಳಿಂದ ಕೋಲಾರ ಬಂದ್; ಪ್ರಮೋದ್ ಮುತಾಲಿಕ್ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ | Kolar Bandh Strike called by Hindu Organizations Pramod Mutalik entry to district prohibited


ಕೋಲಾರ: ಹಿಂದೂ ಸಂಘಟನೆಗಳಿಂದ ಕೋಲಾರ ಬಂದ್; ಪ್ರಮೋದ್ ಮುತಾಲಿಕ್ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)

ಕೋಲಾರ: ಕೋಲಾರದಿಂದ ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳುತ್ತಿದ್ದ ಮಾಲಾಧಾರಿಗಳ ಮೇಲೆ ಹಲ್ಲೆ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಗುರುವಾರ ಕೋಲಾರ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಪ್ರಮೋದ್ ಮುತಾಲಿಕ್ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ‌ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ನೀಡಿದ್ದಾರೆ. ಈ ಮಧ್ಯೆ, ಬಂದ್​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಮೋದ್ ಮುತಾಲಿಕ್ ಕೋಮು ಪ್ರಚೋದನಾ ಬಾಷಣ ಮಾಡಿರುವ ಉದಾಹರಣೆ ಇದೆ, ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್ 18 ರಂದು ಜಿಲ್ಲಾ ಪ್ರವೇಶಕ್ಕೆ ನಿಷೇಧ ಜೊತೆಗೆ ಆಡಿಯೋ ವಿಡಿಯೋ ಬಾಷಣ ಮಾಡದಂತೆ ನಿರ್ಭಂಧ ಹಾಕಲಾಗಿದೆ.

ಪ್ರಕರಣದ ಹಿನ್ನೆಲೆ ಏನು?
ಇದೇ 13 ರ ಶನಿವಾರ ರಾತ್ರಿ ಕೋಲಾರದಿಂದ ಚಿಕ್ಕಮಗಳೂರಿನ ದತ್ತಪೀಠಕ್ಕೆ 26 ಜನ ದತ್ತ ಮಾಲಾದಾರಿಗಳು ತೆರಳುತ್ತಿದ್ದ ಬಸ್ ಮೇಲೆ ನಗರದ ಕ್ಲಾಕ್ ಟವರ್ ಬಳಿ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ, ಕೆಲ ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿತ್ತು. ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಅದೇ ದಿನ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಸಹ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಸಿದಂತೆ ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಹಲ್ಲೆ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಬುಧವಾರ ನಗರದಾದ್ಯಂತ ಬೈಕ್ ರ‍್ಯಾಲಿ ನಡೆಸಿದ್ದು, ಗುರುವಾರ ಬಂದ್‌ಗೆ ಬೆಂಬಲ ನೀಡುವಂತೆ ಕೋರಿದ್ದಾರೆ. ಅದರಂತೆ ಗುರುವಾರ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನಗರಕ್ಕೆ ಬಂದು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಲಾಗಿತ್ತು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಕಾರಿ ಡಾ.ಆರ್. ಸೆಲ್ವಮಣಿ, ಪ್ರಮೋದ್ ಮುತಾಲಿಕ್ ಅವರ ಜಿಲ್ಲೆ ಪ್ರವೇಶವನ್ನು ನಿರ್ಬಂಸಿದ್ದು, ಆಡಿಯೋ ಹಾಗೂ ವಿಡಿಯೋ ಭಾಷಣಕ್ಕೆ ನಿಷೇಧ ಹೇರಿದ್ದಾರೆ. ಪ್ರಮೋದ್ ಮುತಾಲಿಕ್ ರಾಜ್ಯದ ನಾನಾ ಭಾಗಗಳಲ್ಲಿ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದರಿಂದ ಅಹಿತಕರ ಸಂಘಟನೆಗಳು ನಡೆದಿವೆ. ಜತೆಗೆ ಅವರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಆ ಹಿನ್ನೆಲೆಯಲ್ಲಿ ನ.18 ರಿಂದ 24 ರವರೆಗೆ ಅವರ ಅವರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

1980ರಿಂದಲೂ ಕೋಲಾರ ಅತ್ಯಂತ ಸೂಕ್ಷ ಪ್ರದೇಶವಾಗಿದ್ದು, ಹಲವು ಕೋಮು ಗಲಭೆಗಳು ನಡೆದ ಉದಾಹರಣೆಗಳಿವೆ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಮುತಾಲಿಕ್‌ರ ಜಿಲ್ಲೆ ಪ್ರವೇಶ ನಿರ್ಬಂಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ; ಘಟನೆ ಖಂಡಿಸಿ ನವೆಂಬರ್ 18 ರಂದು ಕೋಲಾರ ಬಂದ್​

ಇದನ್ನೂ ಓದಿ: ಕೋಲಾರ: ಭಾರೀ ಮಳೆಗೆ ಕೊಳೆಯುತ್ತಿರುವ ಹೂವಿನ ಬೆಳೆ; ರೈತರು ಕಂಗಾಲು

TV9 Kannada


Leave a Reply

Your email address will not be published. Required fields are marked *