ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟವ್ ಆದ ಹಿನ್ನೆಲೆಯಲ್ಲಿ, ಇಂದು ನಡೆಯಬೇಕಿದ್ದಾ ಆರ್​ಸಿಬಿ ವಿರುದ್ಧದ ಪಂದ್ಯವನ್ನು ಮುಂದೂಡಲಾಗಿದೆ.

ಇಂದು ಸಂಜೆ 7.30 ನಿಮಿಷಕ್ಕೆ ಆರ್​ಸಿಬಿ V/S ಕೋಲ್ಕೊತಾ ನೈಟರೈಡರ್ಸ್​ ವಿರುದ್ಧ ಐಪಿಎಲ್ 20-20 ಮ್ಯಾಚ್ ಆರಂಭವಾಗಬೇಕಿತ್ತು. ಆದ್ರೆ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್​ಗೆ ಕೊರೊನಾ ಸೋಂಕು ಇರೋದು ಇಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂದೂಡಿರುವ ಬಿಸಿಸಿಐ, ಈ ಬಗ್ಗೆ ಮಾಹಿತಿ ನೀಡಿದೆ.

ಇನ್ನು ಐಪಿಎಲ್​ ಗೈಡ್​ಲೈನ್ಸ್ ಪ್ರಕಾರ ಸೋಂಕಿತರ ಸಂಪರ್ಕಕ್ಕೆ ಬಂದವರು 6 ದಿನಗಳ ಕಾಲ ತಮ್ಮನ್ನು ತಾವು ಐಸೋಲೇಟ್ ಮಾಡಿಕೊಳ್ಳಬೇಕು. ಜೊತೆಗೆ 1ನೇ ದಿನ, 3 ನೇ ದಿನ ಹಾಗೂ 6 ನೇ ದಿನ ಸೇರಿದಂತೆ 3 ನೆಗೆಟಿವ್ ರಿಪೋರ್ಟ್​ಗಳನ್ನು ಕೂಡ ಸಲ್ಲಿಸಬೇಕು.

The post ಕೋಲ್ಕೊತಾದ ಇಬ್ಬರು ಆಟಗಾರರಿಗೆ ಕೊರೊನಾ; ಇಂದು RCB ಮ್ಯಾಚ್ ನಡೆಯಲ್ಲ appeared first on News First Kannada.

Source: newsfirstlive.com

Source link