1/5
ನೀವು ಕೋಳಿ ಮೊಟ್ಟೆ ಬಳಸಿರಬಹುದು. ಎಗ್ ಆಮ್ಲೆಟ್, ಎಗ್ ಬುರ್ಜಿ, ಎಗ್ ಮಸಾಲ, ಬೇಯಿಸಿದ ಮೊಟ್ಟೆ, ಹಸಿ ಮೊಟ್ಟೆ ಹೀಗೆ ವಿವಿಧ ಆಹಾರ ಪದಾರ್ಥವನ್ನೂ ಸೇವಿಸಿರಬಹುದು. ಮೊಟ್ಟೆ ತಿನ್ನಲು ಹತ್ತಾರು ಪದಾರ್ಥಗಳಿವೆ. ಕೋಳಿ, ಮೀನು ಮುಂತಾದ ನಾನ್ ವೆಜ್ ಆಹಾರ ತಿನ್ನದವರೂ ಮೊಟ್ಟೆ ತಿನ್ನುವುದು ಇರುತ್ತದೆ. ಡಯಟ್, ಫಿಟ್ನೆಸ್ ಅಷ್ಟೇ ಅಲ್ಲದೆ ಆರೋಗ್ಯಕರ ಆಹಾರವಾಗಿಯೂ ಮೊಟ್ಟೆ ಉಪಯುಕ್ತ. ಅದೇ ಕಾರಣಕ್ಕೆ ಮೊಟ್ಟೆ ಬಹಳ ಅಚ್ಚುಮೆಚ್ಚಿನ ಆಹಾರ. ಆದರೆ, ಕೋಳಿಯೊಂದು ವರ್ಷಕ್ಕೆ ಎಷ್ಟು ಮೊಟ್ಟೆ ಇಡುತ್ತದೆ? ನಿಮಗೆ ಗೊತ್ತೇ?
2/5
ಈ ಪ್ರಶ್ನೆ ಕೇಳಿ ಒಂದು ಕ್ಷಣ ನೀವೂ ಗೊಂದಲಕ್ಕೆ ಒಳಗಾಗಿರಬಹುದು. ನೀವು ದಿನಕ್ಕೆ ಎಷ್ಟು ಮೊಟ್ಟೆ ತಿನ್ನುತ್ತೀರಿ, ಅದರಂತೆ ವರ್ಷಕ್ಕೆ ಎಷ್ಟು ಮೊಟ್ಟೆ ತಿನ್ನುತ್ತೀರಿ ಎಂದು ಅಂದಾಜು ಲೆಕ್ಕಾಚಾರ ನೀವು ಹೇಳಬಹುದು. ಆದರೆ, ಒಂದು ಕೋಳಿ ಎಷ್ಟು ಮೊಟ್ಟೆ ಇಡುತ್ತದೆ ಎಂದು ದಿನವೂ ಮೊಟ್ಟೆ ತಿನ್ನುವವರಿಗೂ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ಸಾಮಾನ್ಯವಾಗಿ ವಿಶ್ವದಾದ್ಯಂತ ಕೋಳಿ ಮೊಟ್ಟೆಯನ್ನು ಮಾತ್ರ ಆಹಾರವಾಗಿ ಬಳಸಲಾಗುತ್ತದೆ. ಬಾತುಕೋಳಿ, ಟರ್ಕಿ ಮತ್ತು ಇತರ ಹಕ್ಕಿಗಳ ಮೊಟ್ಟೆಯನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ ಆದರೂ ಕೋಳಿ ಮೊಟ್ಟೆಯಷ್ಟು ಅವು ವ್ಯಾಪಕ ಬಳಕೆ ಆಗುವುದಿಲ್ಲ.
3/5
ಪೌಲ್ಟ್ರಿ ವಿಜ್ಞಾನಿ ಡಾ. ಎಯು ಕಿದ್ವಾಯಿ ಪ್ರಕಾರ ಪೌಲ್ಟ್ರಿಯಲ್ಲಿ ಇರುವ ಕೋಳಿ ಒಂದು ವಾರ್ಷಿಕವಾಗಿ 305 ರಿಂದ 310 ಮೊಟ್ಟೆಯನ್ನು ಇಡುತ್ತದೆ. ಅಂದರೆ, ಪ್ರತಿ ತಿಂಗಳಿಗೆ ಕೋಳಿ ಸರಾಸರಿ 25 ರಿಂದ 26 ಮೊಟ್ಟೆ ಇಡುತ್ತದೆ. ಈ ಸಂಖ್ಯೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕೂಡ ಆಗಬಹುದು. ಪೌಲ್ಟ್ರಿ ಕೋಳಿ ಹೊರತುಪಡಿಸಿ ದೇಸಿ, ಮನೆಯ ಕೋಳಿ ಆದರೆ ಅದು 150 ರಿಂದ 200 ಮೊಟ್ಟೆಗಳನ್ನು ವಾರ್ಷಿಕವಾಗಿ ಇಡುತ್ತದೆ.
4/5
ಯುಪಿ ಪೌಲ್ಟ್ರಿ ಫಾರ್ಮ್ಸ್ ಅಸೋಸಿಯೇಷನ್ನ ಅಧ್ಯಕ್ಷ ನವಾಬ್ ಅಲಿ ಅಕ್ಬರ್ ಹೇಳುವಂತೆ, ಕೋಳಿಯ ಮೊಟ್ಟೆ ಇಡುವ ಸಾಮರ್ಥ್ಯ ಅದನ್ನು ನೋಡಿಕೊಳ್ಳುವ ಪೌಲ್ಟ್ರಿ ಮೇಲೆ ಅವಲಂಬಿತವಾಗಿ ಇರುತ್ತದೆ. ಕೋಳಿ ಎಷ್ಟು ಆರೋಗ್ಯಕರವಾಗಿ ಇದೆ ಎಂಬುದರ ಮೇಲೆ ಇರುತ್ತದೆ. ಅವರ ಪ್ರಕಾರವೂ ಪೌಲ್ಟ್ರಿ ಕೋಳಿ ವಾರ್ಷಿಕವಾಗಿ ಸರಾಸರಿ 300 ರಿಂದ 330 ಮೊಟ್ಟೆಗಳನ್ನು ಇಡುತ್ತದೆ.
5/5
ನವಾಬ್ ಅಲಿ ಪ್ರಕಾರ ಕೋಳಿಗೆ 75 ರಿಂದ 80 ವಾರಗಳ ಕಾಲ ಮೊಟ್ಟೆ ಇಡುವ ಸಾಮರ್ಥ್ಯ ಇರುತ್ತದೆ. ಅದರ ಹೊರತಾಗಿ, ಕೆಲವು ವಿಶೇಷ ತಳಿಯ ಕೋಳಿಗಳು 100 ವಾರಗಳ ವರೆಗೂ ಮೊಟ್ಟೆ ಇಡುತ್ತದೆ.