ಕೋವಿಡ್​ನಿಂದಾಗುವ ಶ್ವಾಸಕೋಶ ಸಮಸ್ಯೆಗೆ ಗೋಮೂತ್ರ ಮದ್ದು- ಬಿಜೆಪಿ ಸಂಸದೆ

ಕೋವಿಡ್​ನಿಂದಾಗುವ ಶ್ವಾಸಕೋಶ ಸಮಸ್ಯೆಗೆ ಗೋಮೂತ್ರ ಮದ್ದು- ಬಿಜೆಪಿ ಸಂಸದೆ

ಭೋಪಾಲ್: ಗೋಮೂತ್ರ ಸೇವಿಸುವುದರಿಂದ ಕೋವಿಡ್​ನಿಂದ ಉಂಟಾಗುವ ಶ್ವಾಸಕೋಶದ ತೊಂದರೆ ನಿವಾರಣೆಯಾಗುತ್ತದೆಂದು ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಥಾಕೂರ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ತಾವು ಪ್ರತಿದಿನ ಗೋಮೂತ್ರ ಸೇವಿಸೋದಾಗಿ ಹೇಳಿಕೊಂಡಿದ್ದಾರೆ.

ನಮ್ಮಲ್ಲಿ ದೇಶಿ ತಳಿಯ ಗೋಮೂತ್ರವನ್ನು ಪ್ರತಿದಿನ ಸೇವಿಸುವುದರಿಂದ ಕೋವಿಡ್​ನಿಂದ ಆಗುವ ಶ್ವಾಸಕೋಶ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ನಾನು ತುಂಬಾ ನೋವಿನಲ್ಲಿದ್ದೆ ಹಾಗೂ ಪ್ರತಿದಿನ ಗೋಮೂತ್ರ ಸೇವಿಸಿದೆ. ಹೀಗಾಗಿ ನಾನೀಗ ಕೊರೊನಾಗಾಗಿ ಯಾವುದೇ ಔಷಧಿಯನ್ನ ಸೇವಿಸಿಲ್ಲ ಮತ್ತು ನನಗೀಗ ಕೊರೊನಾ ಸೋಂಕು ಇಲ್ಲ ಎಂದು ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಮುಂದುವರೆದು ಗೋಮೂತ್ರ ಜೀವ ರಕ್ಷಕ ಅಂತಲೂ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ರಗ್ಯಾ ಥಾಕೂರ್.. ಗೋಮೂತ್ರದ ಮಿಶ್ರಣ ಮತ್ತು ಅದರ ಉತ್ಪನ್ನಗಳು ಕ್ಯಾನ್ಸರ್ ಗುಣಪಡಿಸಿವೆ ಎಂದು ಹೇಳಿದ್ದರು. ಡಿಸೆಂಬರ್ 2020 ರಲ್ಲಿ ಪ್ರಗ್ಯಾ ಥಾಕೂರ್ ಕೋವಿಡ್​ ಸೋಂಕಿಗೆ ಒಳಗಾಗಿ ಏಮ್ಸ್​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುದ್ದನ್ನ ಇಲ್ಲಿ ಸ್ಮರಿಸಬಹುದು.

The post ಕೋವಿಡ್​ನಿಂದಾಗುವ ಶ್ವಾಸಕೋಶ ಸಮಸ್ಯೆಗೆ ಗೋಮೂತ್ರ ಮದ್ದು- ಬಿಜೆಪಿ ಸಂಸದೆ appeared first on News First Kannada.

Source: newsfirstlive.com

Source link