ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ 25 ವರ್ಷ ಆಗುವವರೆಗೂ ತಿಂಗಳಿಗೆ ₹2,500 ಪೆನ್ಷನ್

ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ 25 ವರ್ಷ ಆಗುವವರೆಗೂ ತಿಂಗಳಿಗೆ ₹2,500 ಪೆನ್ಷನ್

ನವದೆಹಲಿ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿನ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕದಿರಲೆಂದು ದೆಹಲಿಯ ಸರ್ಕಾರ ಹೊಸ ಘೋಷಣೆಗಳನ್ನು ಮಾಡಿದೆ. ಇದರಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ 25 ವರ್ಷ ವಯಸ್ಸಾಗುವವರೆಗೂ ತಿಂಗಳಿಗೆ 2,500 ಪರಿಹಾರ ಧನ ನೀಡುವುದಾಗಿ ಘೋಷಿಸಿದೆ.

ಕೇಜ್ರಿವಾಲ್ ಸರ್ಕಾರದ ಘೋಷಣೆಗಳು..

1. ಕೋವಿಡ್​ನಿಂದ ಸಾವನ್ನಪ್ಪಿದವರ ಪ್ರತಿ ಕುಟುಂಬಕ್ಕೂ 50,000 ಪರಿಹಾರ ನಿಧಿ
2. ಕುಟುಂಬದ ಮುಖ್ಯಸ್ಥರು ಸಾವನ್ನಪ್ಪಿದರೆ ಅಂಥ ಕುಟುಂಬಕ್ಕೆ ಪ್ರತಿ ತಿಂಗಳಿಗೆ 2,500 ರೂ ಪೆನ್ಷನ್
(ಪತಿ ಸಾವನ್ನಪ್ಪಿದ್ದರೆ ಪತ್ನಿಗೆ ಪೆನ್ಷನ್ ಹಣ)
(ಪತ್ನಿ ಸಾವನ್ನಪ್ಪಿದ್ದರೆ ಪತಿಗೆ ಪೆನ್ಷನ್ ಹಣ)
(ಅವಿವಾಹಿತ/ತೆ ಸಾವನ್ನಪ್ಪಿದ್ದರೆ ಪೋಷಕರಿಗೆ ಪೆನ್ಷನ್ ಹಣ)
3. ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಅವರು 25 ವರ್ಷದವರಾಗುವವರೆಗೂ ಪ್ರತೀ ತಿಂಗಳು 2,500 ರೂ ಪೆನ್ಷನ್.. ಹಾಗೂ ಉಚಿತ ಶಿಕ್ಷಣ.
4. ರೇಷನ್​ ಕಾರ್ಡ್ ಹೊಂದಿರದ ಬಡವರಿಗೂ ಪಡಿತರ.
5. ಈ ತಿಂಗಳು 72 ಲಕ್ಷ ಮಂದಿಗೆ ಉಚಿತ 5 ಕೆ.ಜಿ. ಪಡಿತರ ವಿತರಣೆ.

The post ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ 25 ವರ್ಷ ಆಗುವವರೆಗೂ ತಿಂಗಳಿಗೆ ₹2,500 ಪೆನ್ಷನ್ appeared first on News First Kannada.

Source: newsfirstlive.com

Source link