ಹುಬ್ಬಳ್ಳಿ: ಕೋವಿಡ್‌ ದೃಢಪಟ್ಟಿದ್ದ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹುಷಾರಾಗಿ ಕಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದಿದ್ದ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿದ್ದಂತೆ ನೇರವಾಗಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.

ಹೌದು, ಬಸವರಾಜ ಹೊರಟ್ಟಿ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತಲ್ಲಿನರಾಗಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ ಅವರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ತಮ್ಮ ಇಳಿವಯಸ್ಸಿನಲ್ಲೂ ತಮ್ಮ ನೆಚ್ಚಿನ ಕೃಷಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಸದ್ಯ ತಮ್ಮ ನೆಚ್ಚಿನ ನಿಸರ್ಗ ತೋಟದ ಮನೆಯಲ್ಲಿರುವ ಅವರು ಹೊಲದಲ್ಲಿ ಸ್ವತಃ ತಾವೇ ಟ್ರ್ಯಾಕ್ಟರ್ ಓಡಿಸುವ ಮೂಲಕ ಉಳುಮೆ ಮಾಡುತ್ತ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

The post ಕೋವಿಡ್​ನಿಂದ ಗುಣಮುಖರಾಗ್ತಿದ್ದಂತೆಯೇ ಟ್ರ್ಯಾಕ್ಟರ್ ಏರಿ ಹೊಲ ಉಳುಮೆ ಮಾಡಿದ ಹೊರಟ್ಟಿ appeared first on News First Kannada.

Source: newsfirstlive.com

Source link