ಕೊರೊನಾ ಸೋಂಕಿನಿಂದ ಮೃತಪಟ್ಟ ತಂದೆಯ ಸಾವಿನಿಂದ ದುಃಖಿತಳಾದ ಮಗಳು, ಸುಡುವ ಚಿತೆಗೆ ಹಾರಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

73 ವರ್ಷದ ದಾಮೋದರ್​ ದಾಸ್​​ ಶಾರದಾ ಮಂಗಳವಾರ ಬೆಳಗ್ಗೆ ಕೊರೊನಾದಿಂದ ಸಾವನ್ನಪ್ಪಿದ್ದರು. ರೋಗಿಯ ಸಾವಿನ ನಂತರ ಅಂತ್ಯಕ್ರಿಯೆಗಾಗಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಅಂತ್ಯಕ್ರಿಯೆಯ ವೇಳೆ ಕಿರಿಯ ಮಗಳು ಸ್ಮಶಾನದ ಒಳಗೆ ಹೋಗಬೇಕೆಂದು ಹಟ ಹಿಡಿದಿದ್ದಾಳೆ.

ಈ ವೇಳೆ ಇದ್ದಕ್ಕಿದ್ದಂತೆ ಒಳ ಹೋದ ಪುತ್ರಿ ಚಂದ್ರಕಲಾ, ತಂದೆಯ ಸುಡುವ ಚಿತೆಗೆ ಹಾರಿದ್ದಾಳೆ ಅಂತಾ ಪೊಲೀಸರು ತಿಳಿಸಿದ್ದಾರೆ. ಇನ್ನು ಅಕೆಯನ್ನ ಬಾರ್ಮರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೇಕಡಾ 70ರಷ್ಟು ದೇಹ ಸುಟ್ಟು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

The post ಕೋವಿಡ್​ನಿಂದ ಮೃತರಾದ ತಂದೆಯ ಚಿತೆಗೆ ಹಾರಿದ ಮಗಳು appeared first on News First Kannada.

Source: newsfirstlive.com

Source link