ಕೋವಿಡ್​ನೊಂದಿಗೆ ಹೋರಾಡಿ ಗೆದ್ದ ಒಂದು ತಿಂಗಳ ಮಗು.. ಈಗ ಸಂಪೂರ್ಣ ಗುಣಮುಖ


ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿ ದೆಹಲಿ ಮೂಲ್​ಚಾಂದ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1 ತಿಂಗಳ ಮಗು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದೆ.

ಇತ್ತೀಚಿಗೆ ಕಿವಿಯ ಸೋಂಕಿನಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆಗೂ ಮುನ್ನ ಮಗುವಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿತ್ತು. ಈ ಟೆಸ್ಟ್​ನಲ್ಲಿ ಕಂದಮ್ಮನಿಗೆ ಮಾರಿ ಕೊರೊನಾ ತಗುಲಿರುವುದು ಖಾತ್ರಿಯಾಗಿತ್ತು. ಸೋಂಕು ತಗುಲಿದ ಬೆನ್ನಲ್ಲೇ ಮಗುವಿಗೆ ವಿಶೇಷ ಆರೈಕೆಯೊಂದಿಗೆ ನಿಗಾ ವಹಿಸಲಾಗಿತ್ತು.

ಸದ್ಯ ಮಗು ಕೋವಿಡ್​ ಸೋಂಕಿನ ವಿರುದ್ಧ ಹೋರಾಡಿ ಕೊನೆಗೆ ಆಸ್ಪತ್ರೆಯಿಂದ ಡಿಸ್ಚಾಜ್​ ಆಗಿದೆ. ಇದನ್ನು ಆಸ್ಪತ್ರೆಯು ತನ್ನ ಟ್ವಿಟರ್​ ಖಾತೆಯಲ್ಲಿ ದೃಢಪಟಿಸಿದ್ದು ಮಗು ಈಗ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖ ಹೊಂದಿದೆ ಎಂದು ತಿಳಿಸಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳಿಗೆ ಹೆಚ್ಚಿನ ಸೋಂಕು ತಗುಲುತ್ತಿದ್ದು ಫೊಷಕರು ಕೋವಿಡ್​ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ ಮಕ್ಕಳನ್ನು ಸೋಂಕಿನಿಂದ ದೂರ ಇಡಬೇಕು ಎಂದು ತಜ್ಞರು ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *