ಐಪಿಎಲ್​​ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಮಿಂಚಿದ್ದ ಯುವ ವೇಗಿ ಚೇತನ್​ ಸಕಾರಿಯಾ ಅವರ ತಂದೆ ಕಾಂಜಿಬಾಯ್​ ಸಕಾರಿಯಾ ಕೊರೊನಾ ಸೋಂಕಿನಿಂದ  ಇಂದು ನಿಧನರಾಗಿದ್ದಾರೆ.

ಟೂರ್ನಿ ಅರ್ಧಕ್ಕೆ ರದ್ದಾದ ಬೆನ್ನಲ್ಲೆ ಸಕಾರಿಯಾ ಮನೆಗೆ ತೆರಳಬೇಕಿತ್ತು. ಅಷ್ಟರಲ್ಲಾಗಲೇ ತಂದೆ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಂಜಿಬಾಯ್​ ಸಕಾರಿಯಾ ಇಂದು ಕೊನೆಯುಸಿರೆಳೆದಿದ್ದಾರೆ.

3 ತಿಂಗಳ ಹಿಂದೆ ಸೋದರನ ನಿಧನ
ಸಯ್ಯದ್​ ಮುಸ್ತಾಕ್​ ಅಲಿ ಟ್ರೋಫಿ ಸಂದರ್ಭದಲ್ಲಿ ಅಂದರೆ ಮೂರು ತಿಂಗಳ ಹಿಂದೆ ಸಕಾರಿಯಾ ಸಹೋದರ ಕೂಡ ನಿಧನ ಹೊಂದಿದ್ದರು. ಸೋಂಕು ತಗುಲಿದ ಸಂದರ್ಭದಲ್ಲಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು ಹಣದ ಕೊರತೆ ಎದುರಾಗಿತ್ತು. ಐಪಿಎಲ್​ನಿಂದ ಬಂದ ಹಣದಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಸಕಾರಿಯಾ ಈ ಹಿಂದೆ ಹೇಳಿದ್ದರು.

ಏಳು ಪಂದ್ಯಗಳನ್ನಾಡಿದ್ದ ಸಕಾರಿಯಾ, 8.22ರ ಎಕಾನಮಿಯಂತೆ ಏಳು ವಿಕೆಟ್​ ಕಬಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. 1.20 ಕೋಟಿಗೆ ಸೌರಾಷ್ಟ್ರದ ಚೇತನ್‌ ಸಕಾರಿಯಾ ರಾಜಸ್ಥಾನ್ ರಾಯಲ್ಸ್ ತಂಡದ​ ಪಾಲಾಗಿದ್ದರು. ಸಕಾರಿಯಾ ತಂದೆಯ ನಿಧನಕ್ಕೆ ಫ್ರಾಂಚೈಸಿ ಹಾಗೂ ಐಪಿಎಲ್​ನಲ್ಲಿ ಪಾಲ್ಗೊಂಡಿದ್ದ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.

The post ಕೋವಿಡ್​​ನಿಂದ ತಂದೆಯನ್ನ ಕಳೆದುಕೊಂಡ ಚೇತನ್ ಸಕಾರಿಯಾ appeared first on News First Kannada.

Source: newsfirstlive.com

Source link