ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಗೆ ಬ್ರೇಕ್​ ಹಾಕಲು ಸರ್ಕಾರ ಕ್ಲೋಸ್​​ಡೌನ್​ ಮೊರೆ ಹೋಗಿದ್ದು, ಕ್ಲೋಸ್​​ಡೌನ್​​ ಎರಡನೇ ದಿನವಾದ ಇಂದು ಸಿಎಂ ಬಿ.ಎಸ್.​ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಯಿತು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್​.ಅಶೋಕ್ ಅವರು, ಯಾವ ಜಿಲ್ಲೆಗಳಲ್ಲಿ ಪಾಸಿಟಿವ್ ಹೆಚ್ಚು ಬರುತ್ತಿದೆ..? ಏನೆಲ್ಲಾ ಕ್ರಮಗಳು ಕೈಗೊಂಡಿದ್ದಾರೆ..? ಯಾವ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸಚಿವರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಪರಿಹಾರ ನಿಧಿಗೆ ಮಂತ್ರಿಗಳಿಂದ ಒಂದು ವರ್ಷದ ಸಂಬಳವನ್ನು ನೀಡುತ್ತಿದ್ದೇವೆ. ವ್ಯಾಕ್ಸಿನ್ ವಿತರಣೆ ಅಭಿಯಾನಕ್ಕೆ ಮಾನಿಟರ್ ಮಾಡುವಂತೆ ಸಿಎಂ ಸಲಹೆ ನೀಡಿದ್ದಾರೆ. ಬ್ಲಾಕ್ ದಂಧೆಗೆ ಕಡಿವಾಣ ಹಾಕುವಂತೆ ಸಿಎಂ ಎಚ್ಚರಿಕೆ ‌ನೀಡಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ನಿನ್ನೆ ಶವಸಂಸ್ಕಾರಕ್ಕೆ ಕ್ಯೂ ಆಗಿತ್ತು. ಮಾವಳ್ಳಿ ಮತ್ತು ಗಿಡ್ಡೇನಹಳ್ಳಿಯಲ್ಲಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಬಯಲು ಶವಸಂಸ್ಕಾರ ಎರಡು ಕಡೆ ಪ್ರಾರಂಭ ಆಗಿದೆ. 70ಕ್ಕೂ ಹೆಚ್ಚು ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 230 ಎಕರೆ ಜಮೀನನ್ನು ಸ್ಮಶಾನಕ್ಕೆ ವ್ಯವಸ್ಥೆ ಮಾಡಿದ್ದೇನೆ. ಶವಸಂಸ್ಕಾರಕ್ಕೆ ಇರುವ ಸಮಸ್ಯೆ ‌ಮುಗಿದಿದೆ ಎಂದು ತಿಳಿಸಿದರು.

The post ಕೋವಿಡ್​​​ ಪರಿಹಾರ ನಿಧಿಗೆ ಎಲ್ಲಾ ಮಂತ್ರಿಗಳ 1 ವರ್ಷದ ಸಂಬಳ ಕೊಡ್ತಾ ಇದ್ದೀವಿ- ಆರ್​.ಅಶೋಕ್​​ appeared first on News First Kannada.

Source: newsfirstlive.com

Source link