ಕಲಬುರಗಿ: ಕೊರೊನಾ ಎರಡನೇ ಅಲೆ ಹಳ್ಳಿಗಳಲ್ಲಿಯೂ ತನ್ನ ರುದ್ರ ನರ್ತನ ತೋರುತ್ತಿದ್ದು, ಹಲವು ಗ್ರಾಮಗಳಲ್ಲಿ ಪಾಸಿಟಿವ್​ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ಸಿಎಂ ಬಿಎಸ್​ವೈ ಅವರು ಎಲ್ಲಾ ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್​ ಸೆಂಟರ್​ಗಳಿಗೆ ದಾಖಲಾಗಬೇಕು ಎಂದು ಅಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದ್ದಾರೆ. ಆದರೆ ಜಿಲ್ಲೆಯ ಅಧಿಕಾರಿಗಳಿಗೆ ಕೋವಿಡ್​ ಕೇರ್ ಸೆಂಟರ್​ಗಳಲ್ಲಿ ದಾಖಲಾದ ಮಂದಿಯನ್ನು ಕಾಯೋದೇ ಬಹುದೊಡ್ಡ ಸಾಹಸವಾಗಿದೆ.

ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ದಾಖಲಾಗುವ ಸೋಂಕಿತರು ಅಧಿಕಾರಿಗಳ ಕಣ್ತಪ್ಪಿಸಿ ಎಸ್ಕೇಪ್​ ಆಗುತ್ತಿದ್ದು, ಅಫಜಲಪುರದ ಬಿ.ಸಿ.ಎಂ ಹಾಸ್ಟೆಲ್​​​ನಲ್ಲಿ ಆರಂಭಿಸಿರುವ ಕೋವಿಡ್​​ ಕೇರ್​ ಸೆಂಟರ್​​ನಿಂದ 8 ಸೋಂಕಿತರು ಎಸ್ಕೇಪ್​ ಆಗಿದ್ದಾರೆ. ಎಸ್ಕೇಪ್ ಆಗಿದ್ದ ಸೋಂಕಿತರನ್ನು ಮರಳಿ ಕರೆತರಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದು, ಎಷ್ಟೇ ತಿಳುವಳಿಕೆ ಮೂಡಿಸಿದರೂ ಕೇರ್ ಸೆಂಟರ್​​ಗಳತ್ತ ಬರಲು ಸೋಂಕಿತರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಸೋಂಕಿತರು ತಮ್ಮ ಮಾತು ಕೇಳದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಧಿಕಾರಿಗಳು ಪೊಲೀಸರ ನೆರವು ಪಡೆದುಕೊಂಡಿದ್ದು, ಆ ಮೂಲಕ ಎಸ್ಕೇಪ್ ಆದವರನ್ನ ಮರಳಿ ಕೇಂದ್ರಕ್ಕೆ ಕರೆತಂದಿದ್ದಾರೆ. ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಸೋಂಕಿತರು ಕೋವಿಡ್​ ಕೇರ್​ ಸೆಂಟರ್​ನಿಂದ ತಮ್ಮ ಮನೆಗಳಿಗೆ ತೆರಳಿದ್ದು, ಇದರಿಂದ ಕೊರೊನಾ ಮನೆಯ ಎಲ್ಲ ಸದಸ್ಯರಿಗೂ ಹರಾಡುವ ಅಪಾಯವಿದೆ. ಆದರೂ ಜನರು ಸೆಂಟರ್​​ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಕೇಂದ್ರದಿಂದ ಎಸ್ಕೇಪ್​ ಆಗಿದ್ದ 8 ಮಂದಿಯ ವಿರುದ್ಧವೂ ಅಧಿಕಾರಿಗಳು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

The post ಕೋವಿಡ್​​ ಕೇರ್​ ಸೆಂಟರ್​​​ನಿಂದ 8 ಮಂದಿ ಎಸ್ಕೇಪ್​​; ಸೋಂಕಿತರನ್ನು ಕಾಯೋದೇ ಅಧಿಕಾರಿಗಳಿಗೆ ಟಾಸ್ಕ್​​​ appeared first on News First Kannada.

Source: newsfirstlive.com

Source link