ಕೋವಿಡ್​​ ಪರಿಹಾರಕ್ಕಾಗಿ ಮಾಸ್ಟರ್​​ ಪ್ಲಾನ್​​; ಮೃತ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆಸ್ಪತ್ರೆ ಸಿಬ್ಬಂದಿ

ಕೋವಿಡ್​​ ಪರಿಹಾರಕ್ಕಾಗಿ ಮಾಸ್ಟರ್​​ ಪ್ಲಾನ್​​; ಮೃತ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆಸ್ಪತ್ರೆ ಸಿಬ್ಬಂದಿ

ಬಾಗಲಕೋಟೆ: ಕೊರೊನಾ​​​ ವೈರಸ್​ಗೆ ಬಲಿಯಾದ ಮೃತರಿಗೆ ಸರ್ಕಾರ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರ ಪಡೆಯಲು ಕಿಡಿಗೇಡಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಎರಡು ತಿಂಗಳು ಹಿಂದೆ ತೀರಿಕೊಂಡಿದ್ದ ಮಹಿಳೆಗೆ ಈಗ ಆರ್​ಟಿಪಿಸಿಆರ್ ಪಾಸಿಟಿವ್ ರಿಪೋರ್ಟ್ ತಯಾರಿ ಮಾಡಿ ಈ ಪರಿಹಾರ ಪಡೆಯಲು ಯತ್ನಿಸಿರುವುದು ತಿಳಿದು ಬಂದಿದೆ.

ರಾಜ್ಯ ಸರ್ಕಾರ ಕೊತೊನಾದಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ ಮಾಡಿದೆ. ಈ ಪರಿಹಾರವನ್ನು ಹೇಗಾದರೂ ಸರಿ ಪಡೆಯಲೇಬೇಕು ಎಂದು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ 2 ತಿಂಗಳ ಹಿಂದೆ ಮೃತಪಟ್ಟ ಮಹಿಳೆಗೆ ಈಗ ಪಾಸಿಟಿವ್ ರಿಪೋರ್ಟ್​ ನೀಡಿದ್ದಾರೆ. ಹೀಗೆ ಗೋಲ್​​ ಮಾಲ್​​ ಮಾಡಿದ ಸಿಬ್ಬಂದಿ ಸ್ಕ್ಯಾನಿಂಗ್ ವಿಭಾಗದ ಸ್ಟಾಫ್​ನರ್ಸ್​ ಬಸವರಾಜ್​ ಬಿಲಕೇರಿ, ಡಾಟಾ ಎಂಟ್ರಿ ಆಪರೇಟರ್​ ಬಸನಗೌಡ ಗಿರಿಯಪ್ಪಗೌಡರನ್ನು ನವನಗರ ಪೊಲೀಸರು ಬಂಧಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶೇಖವ್ವ ರೂಗಿ (53) ಎಂಬವರು, ಮೇ. 2 ರಂದು ಮೃತಪಟ್ಟಿದ್ದರು. ಅಂದು ಆಸ್ಪತ್ರೆ ಸಿಬ್ಬಂದಿ ಶೇಖವ್ವ ರೂಗಿಗೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿರಲಿಲ್ಲ. ಆದರೀಗ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದೇ ತಡ ಇದನ್ನು ಶೇಖವ್ವ ಹೆಸರಿನಲ್ಲಿ ತಿಂದು ಹಾಕಲು ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪುಡ್​ಕಿಟ್​ ಅವಾಂತರ: ವಿತರಣೆ ವೇಳೆ ತಳ್ಳಾಟ, ಕಿತ್ತಾಟ.. ಮುಗಿಬಿದ್ದು ಕಿಟ್ ಹೊತ್ತೊಯ್ದ ಜನ

ಮೇ 1ರಂದು ಶೇಖವ್ವ ಅವರ ಗಂಟಲು ದ್ರವ್ಯ ಸಂಗ್ರಹಿಸಲಾಗಿತ್ತು, ಜುಲೈ 15ರಂದು ಪಾಸಿಟಿವ್ ಬಂದಿದೆ ಎಂದು ಸಿಬ್ಬಂದಿ ರಿಪೋರ್ಟ್​ನಲ್ಲಿ ನಮೂದಿಸಿದ್ದರು. 2 ತಿಂಗಳು ತಡವಾಗಿದ್ದರಿಂದ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅಧಿಕಾರಿಗಳು ತಪಾಸಣೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಪ್ರಕಾಶ್ ಬಿರಾದರ್​ ಮಾಹಿತಿ ನೀಡಿದ್ದಾರೆ.

The post ಕೋವಿಡ್​​ ಪರಿಹಾರಕ್ಕಾಗಿ ಮಾಸ್ಟರ್​​ ಪ್ಲಾನ್​​; ಮೃತ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆಸ್ಪತ್ರೆ ಸಿಬ್ಬಂದಿ appeared first on News First Kannada.

Source: newsfirstlive.com

Source link