ಬಳ್ಳಾರಿ: ಕೊರೊನಾ ಮೂರನೇ ಅಲೆಯ ಬಗ್ಗೆ ತಜ್ಞರು ಮುನ್ಸೂಚನೆ ನೀಡಿರೋ ಹಿನ್ನೆಲೆ ಅವರ ಸಲಹೆ ಮೇರೆಗೆ ಗಣಿನಾಡಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ.  ಮಕ್ಕಳಿಗೆ ಚಿಕಿತ್ಸೆ ನೀಡಲು 50 ವೆಂಟಿಲೇಟರ್‌ ಸಿದ್ಧಪಡಿಸಲಾಗಿದೆ.

ಬಳ್ಳಾರಿ ಹಾಗೂ ವಿಜಯನಗರ ತಾಲೂಕು ಕೇಂದ್ರಗಳಲ್ಲೂ ಕೊರೊನಾ ಎದುರಿಸೋಕೆ ಸಿದ್ಧತೆ ನಡೆದಿದ್ದು, ಮಕ್ಕಳ‌ ತಜ್ಞ ‌ವೈದ್ಯರಿಗೆ‌‌ ಸನ್ನದರಾಗಲು‌‌‌ ಸೂಚನೆ ನೀಡಲಾಗಿದೆ. ಈಗಾಗಲೇ ಎರಡನೇ ಅಲೆಯಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕು ಅಂಟಿದ ಬೆನ್ನಲ್ಲೇ ಎಚ್ಚೆತ್ತಿರುವ ಬಳ್ಳಾರಿ ಜಿಲ್ಲಾಡಳಿತ, ತಾಲೂಕು ಆಸ್ಪತ್ರೆಗಳಲ್ಲೂ 5 ರಿಂದ 10 ಮಕ್ಕಳಿಗೆ ವೆಂಟಿಲೇಟರ್‌ ಸಿದ್ಧ ಮಾಡಿಕೊಳ್ಳುತ್ತಿದೆ.

ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ಬೆಡ್‌ಗಳಲ್ಲಿ 50 ಬೆಡ್‌ಗಳಷ್ಟು ಮಕ್ಕಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಈಗಾಗಲೇ ಮಕ್ಕಳ ಮುಖಕ್ಕೆ ಹೊಂದುವ ಒಂದು ಸಾವಿರ ಆಕ್ಸಿಜನ್ ಮಾಸ್ಕ್ ಖರೀದಿ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲೂ 6 ಕೆಎಲ್ ಆಕ್ಸಿಜನ್ ನೀಡಲು ಚಿಂತನೆ ನಡೆಸಲಾಗಿದೆ.

The post ಕೋವಿಡ್​​ 3ನೇ ಅಲೆ ತಡೆ: ಬಳ್ಳಾರಿಯಲ್ಲಿ ಮಕ್ಕಳ ಚಿಕಿತ್ಸೆಗೆ ಸಿದ್ಧತೆ appeared first on News First Kannada.

Source: newsfirstlive.com

Source link