ದಾವಣಗೆರೆ: ಕೋವಿಡ್ ಕೇರ್ ಸೆಂಟರ್​ನಲ್ಲಿ ಕೆಲಸ ಮಾಡಿದವರಿಗೆ ಗರಿ ಗರಿ ನೋಟನ್ನ ಹಂಚಿದ್ದಾರೆ ಶಾಸಕ ರೇಣುಕಾಚಾರರ್ಯ.

ಜಿಲ್ಲೆಯ, ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಸೆಂಟರ್ನಲ್ಲಿ, ಕಳೆದು ಎರಡು ತಿಂಗಳಿಂದ 500ಕ್ಕೂ ಅಧಿಕ ಕೋವಿಡ್ ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ, ಕೋವಿಡ್ ಕೇರ್​ನಲ್ಲಿ ಕೆಲಸ ಮಾಡಿದವರಿಗೆ 1 ಸಾವಿರ ರೂಪಾಯಿ ಹಣ ನೀಡಿದ್ರು ಶಾಸಕರು.

ಕೋವಿಡ್ ಸೋಂಕಿತರ ಸೇವೆ ಮಾಡಿದ ನರ್ಸ್​​, ಅಡುಗೆ ಸಹಾಯಕಿಯರಿಗೆ, ಪೌರ ಕಾರ್ಮಿಕರಿಗೆ ಸೇರಿ ಕೆಲಸ ಮಾಡಿದ ಎಲ್ಲರಿಗೂ  ಸಾವಿರ ರೂಪಾಯಿಯನ್ನ ಹಂಚಿದ್ದಾರೆ. ಕಳೆದ ಒಂದು ತಿಂಗಳಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿದ್ದ ರೇಣುಚಾರ್ಯ, ನಿನ್ನೆ ತಮ್ಮ ವಾಸ್ತವ್ಯ ಸಮಾಪ್ತಿಗೊಳಿಸಿ ಹಣ ಹಂಚಿ, ಅಲ್ಲಿಂದ ತೆರಳಿದ್ದಾರೆ.

The post ಕೋವಿಡ್​ ಕೇರ್​ ಸೆಂಟರ್​ನಲ್ಲಿ ಕೆಲಸ ಮಾಡಿದವರಿಗೆ ಸಾವಿರ ರೂಪಾಯಿ ಹಂಚಿದ ಶಾಸಕ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link