ಬೆಳಗಾವಿ: ಗ್ರಾಮಕ್ಕೆ ವಕ್ಕರಿಸಿದ್ದ ಕೊರೊನಾ ಮಹಾಮಾರಿಯನ್ನ ಕಟ್ಟಿಹಾಕಲು ಗ್ರಾಮದಲ್ಲಿ ಬಿಟ್ಟಿದ್ದ ಮರಡಿಮಠದ ಸೌರ್ಯ ಕುದುರೆ ಬೆಳಗಾಗುವುದರಲ್ಲಿಯೇ ಮೃತಪಟ್ಟಿರುವ ಘಟನೆ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ಆದರೆ ಏಕಾಏಕಿ ಕುದುರೆ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದರ ನಡುವೆಯೇ ಮಠದ ದೇವರ ಕುದುರೆ ಸಾವನ್ನಪ್ಪಿದ ಕಾರಣ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲು ಮುಂದಾಗಿದ್ದ ಗ್ರಾಮಸ್ಥರು, ಸಾವಿರಾರರು ಸಂಖ್ಯೆ ಸೇರಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆ ಮಾಡುವ ವೇಳೆ ಯಾವುದೇ ಸಾಮಾಜಿ ಅಂತರ, ಮಾಸ್ಕ್​ ಇಲ್ಲದೇ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಕೊರೊನಾ ದೂರವಾಗಲೆಂದು ಗ್ರಾಮದಲ್ಲಿ ಬಿಟ್ಟಿದ್ದ ಕುದುರೆ ಬೆಳಗಾಗುವುದರೊಳಗೆ ಸಾವು

ಇತ್ತ ಘಟನೆ ಕುರಿತು ಮಾಹಿತಿ ಪಡೆದ ತಹಶಿಲ್ದಾರ್​ ಹೊಳೆಪ್ಪಗೋಳ ಅವರು ಗ್ರಾಮಕ್ಕೆ ಭೇಟಿ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಭಕ್ತರು ಮಠ ಪ್ರವೇಶ ಮಾಡದಂತೆ ಮರಡಿ ಮಠವನ್ನು ಸೀಲ್ ಡೌನ್ ಮಾಡಿದ್ದಾರೆ.

The post ಕೋವಿಡ್​ ದೂರವಾಗಲೆಂದು ಬಿಟ್ಟಿದ್ದ ಕುದುರೆ ಸಾವು- ನಿಯಮ ಉಲ್ಲಂಘಿಸಿ ಸಾವಿರಾರು ಜನ ಸೇರಿ ಮೆರವಣಿಗೆ appeared first on News First Kannada.

Source: newsfirstlive.com

Source link