ಬೆಂಗಳೂರು: ಉಚಿತ ಲಸಿಕೆ ನೀಡಬೇಕೆಂದು ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಆರೋಗ್ಯ ಸಚಿವ ಡಾ. ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಹೆಪಟೈಟಿಸ್-ಬಿ ಲಸಿಕೆ ವಿದೇಶದಿಂದ ಭಾರತಕ್ಕೆ ಬರಲು ಇಪ್ಪತ್ತು ವರ್ಷಗಳು ಬೇಕಾಯಿತು. ಇದಕ್ಕೆ ಕಾಂಗ್ರೆಸ್ ಕಾರಣವಾ.? ಕೋವಿಡ್ ಲಸಿಕೆ ಕೇವಲ ಒಂದು ವರ್ಷದಲ್ಲೇ ಸಿಗುವಂತಾಯಿತು. ದೇಶಿಯ ಲಸಿಕೆ ಕೂಡಾ ಲಭ್ಯವಾಗಿದೆ. ಭಾರತೀಯನಾಗಿ ಇದು ಹೆಮ್ಮೆ ಪಡುವ ವಿಚಾರ ಎಂದರು. ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಿದರೆ ಜನ ಛೀಮಾರಿ ಹಾಕುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಟಾಂಗ್ ಕೊಟ್ಟರು.

ಇನ್ನು ರಾಜ್ಯದಲ್ಲಿ ಬ್ಲಾಕ್ ಫಂಗಸ್ ಕೇಸ್ ವಿಚಾರವಾಗಿ ಮಾತನಾಡಿದ ಅವರು, 1564 ಮಂದಿ ಕಪ್ಪು ಫಂಗಸ್​​ ಇನ್​ಫೆಕ್ಷನ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣವಾಗಿ ಗುಣಮುಖ ಆಗಲು ಐದಾರು ವಾರ ಬೇಕು. 62 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದು, ಈವರೆಗೆ ಫಂಗಸ್​​ನಿಂದ 111 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ರು.

ಮುಂದಿನ ವಾರ ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಫಂಗಸ್​​ ಚಿಕಿತ್ಸೆಗೆ ದರ ನಿಗದಿ
ಕಪ್ಪು ಫಂಗಸ್​​ಗೆ ಚಿಕಿತ್ಸೆ ನೀಡಲು ಬಳಸುವ ಆ್ಯಂಫೋಟೆರಿಸಿನ್ ಬಿ ಔಷಧಿ ನಿನ್ನೆಯಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದೆ. 9750 ವಯಲ್ಸ್ ಔಷಧಿಯನ್ನ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಲಟ್​ ಮಾಡಿದೆ. ಇದರಲ್ಲಿ 8860 ವಯಲ್ಸ್ ಬಂದಿದೆ. ಒಟ್ಟಾರೆಯಾಗಿ 18,650 ಬಾಟಲಿಯಷ್ಟು ಔಷಧಿ  ಬಂದಿದೆ. ಸರ್ಕಾರಿ ಆಸ್ಪತ್ರೆಗೆ ಸಂಪೂರ್ಣವಾಗಿ 8860 ವಯಲ್ಸ್​ ಉಪಯೋಗ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗೆ, ಮೆಡಿಕಲ್ ಕಾಲೇಜಿಗೆ 9,740 ಬಾಟಲಿ ಕೊಟ್ಟಿದ್ದೇವೆ. ಖಾಸಗಿಯವರಿಗೆ ಸೂಕ್ತ ದರ ನಿಗದಿಗೆ ಸೂಚಿಸಿದ್ದೇವೆ. ಮುಂದಿನ ವಾರ ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ದರ ನಿಗದಿ ಮಾಡ್ತೇವೆ ಎಂದು ಸುಧಾಕರ್​ ಮಾಹಿತಿ ನೀಡಿದರು.

ಪೋಸ್ಟ್ ಕೋವಿಡ್ ವಾರ್ಡ್ ತೆರೆಯಲು ನಿರ್ಧಾರ
ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಇನ್ಶುರೆನ್ಸ್ ಆ್ಯಡ್ ಮಾಡಬೇಕು. ಪೋಸ್ಟ್ ಕೋವಿಡ್ ವಾರ್ಡ್ ತೆರೆಯಲು ನಿರ್ಧಾರ ಮಾಡಲಾಗಿದೆ. ಪೋಸ್ಟ್ ಕೋವಿಡ್ ಕೊಠಡಿ ಹೇಗೆ ಇರಬೇಕು ಎನ್ನುವ ತರಬೇತಿ ಕೊಡಬೇಕು. ಕೊರೊನಾದಿಂದ ಗುಣಮುಖ ಆದಂತ ಎಲ್ಲರಿಗೂ ಕಪ್ಪು ಫಂಗಸ್​​  ಕಾಣಿಸಿಕೊಳ್ಳಲ್ಲ ಎಂದರು. ಇನ್ನು ಜೂನ್‌ ಅಂತ್ಯದಲ್ಲಿ ಎರಡನೇ ಕೊರೊನಾ ಅಲೆ ಮುಗಿಯುತ್ತದೆ ಎಂಬ ಅಭಿಪ್ರಾಯವಿದೆ. ಜನರ ನಡವಳಿಕೆ ಮೇಲೆ ಅದು ನಿರ್ಧಾರ ಆಗುತ್ತದೆ. ಕಠಿಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸುಧಾಕರ್ ಅಭಿಪ್ರಾಯಪಟ್ಟರು.

ಈವರೆಗೆ ಒಂದುವರೆ ಕೋಟಿ ಜನರಿಗೆ ಲಸಿಕೆ ವಿತರಣೆ
ಈ ತಿಂಗಳಲ್ಲಿ 70 ರಿಂದ 75 ಲಕ್ಷ ಜನರಿಗೆ ಲಸಿಕೆ ಹಾಕಿಸಿದ್ದೇವೆ. ಇವತ್ತಿಗೆ ಒಂದುವರೆ ಕೋಟಿ ಜನರಿಗೆ ಲಸಿಕೆ ಆಗಿದೆ. ಜೂನ್ ಅಂತ್ಯದಲ್ಲಿ ಒಟ್ಟು 2 ಕೋಟಿ ಜನರಿಗೆ ಲಸಿಕೆ ಕೊಡಬೇಕು

 

The post ಕೋವಿಡ್​ ಲಸಿಕೆಗೆ 1 ವರ್ಷ.. ಹೆಪಟೈಟಿಸ್-ಬಿ ಲಸಿಕೆಗೆ 20 ವರ್ಷ ಬೇಕಾಯ್ತು -ಕಾಂಗ್ರೆಸ್​ಗೆ ಸುಧಾಕರ್ ತಿರುಗೇಟು appeared first on News First Kannada.

Source: newsfirstlive.com

Source link