ಇಡೀ ವಿಶ್ವದಲ್ಲೇ ಕೊರೊನಾ ಹೆಮ್ಮಾರಿಯ ಎರಡನೇ ಅವತಾರ ಪ್ರದರ್ಶಿಸುತ್ತಾ ಅಟ್ಟಹಾಸ ಮೆರಿತಾಯಿದೆ. ಎಲ್ಲಾ ಕಡೆ ಜನ ನರಳಿ ನರಳಿ ಪ್ರಾಣ ಬಿಡ್ತಾಯಿದ್ದಾರೆ. ಈ ನಡುವೆ ಈಗಾಗ್ಲೇ ಎಲ್ಲೆಡೆ ವ್ಯಾಕ್ಸಿನ್​ಗಳ ವಿತರಣೆ ಆಗ್ತಿದ್ದು, ಸಾಕಷ್ಟು ಮಂದಿ ಎರಡು ಡೋಸ್​ಗಳ ವ್ಯಾಕ್ಸಿನೇಷನ್​ ಪಡೆದಿದ್ದಾರೆ. ಇದೀಗ ಅಮೆರಿಕಾದ ಖ್ಯಾತ ವೈದ್ಯ ಯೂನಿವರ್ಸಿಟಿ ಆಫ್​​ ಮೇರಿಲ್ಯಾಂಡ್​ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಫಹೀಮ್ ಯೂನಸ್  ಕೋವಿಡ್ ಸೋಂಕಿತರಿಗೆ ​​ ಕಿವಿ ಮಾತೊಂದನ್ನ ಹೇಳಿದ್ದಾರೆ

ಕೊರೊನಾ ಸೋಂಕಿಗೀಡಾದವರೊಬ್ಬರು ಲಸಿಕೆ ಹಾಕಿಸಿಕೊಳ್ಳೋ ಬಗ್ಗೆ ಫಹೀಮ್ ಅವರಿಗೆ ಪ್ರಶ್ನೆ ಕೇಳಿದ್ದರು. ನಾನು ಸೋಂಕಿಗೀಡಾಗಿದ್ದರಿಂದ ನನ್ನ ದೇಹದಲ್ಲಿ ಆ್ಯಂಟಿಬಾಡೀಸ್​ ಇನ್ನೂ ಇದೆ. ಹೀಗಾಗಿ ನನಗೆ ಲಸಿಕೆ ಅಗತ್ಯವಿಲ್ಲ ಅಂತ ಜನ ಹೇಳ್ತಿದ್ದಾರೆ. ಅದು ನಿಜಾನಾ ಅಂತ ಅವರು ಪ್ರಶ್ನಿಸಿದ್ದರು. ಇದಕ್ಕೆ ಫಹೀಮ್, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ.

ಒಂದರಿಂದ ಮೂರು ತಿಂಗಳಲ್ಲಿ ವ್ಯಾಕ್ಸಿನೇಷನ್​ ಹಾಕಿಸಿಕೊಳ್ಳಿ
‘‘ನಾನು ಪದೇ ಪದೇ ಹೇಳ್ತಾಯಿದ್ದೀನಿ, ಈಗಲೂ ಹೇಳ್ತೀನಿ. ನನ್ನ ಎಲ್ಲಾ ಕೋವಿಡ್​ ಸೋಂಕಿತರು, ಒಂದರಿಂದ ಮೂರು ತಿಂಗಳ ಒಳಗೆ ವ್ಯಾಕ್ಸಿನ್ ಪಡೆದುಕೊಳ್ಳಿ. ಎಲ್ಲರೂ ಹಾಕಿಸಿಕೊಳ್ಳಿ.. ಇದು ನನ್ನ ಮನವಿ. ಲಸಿಕೆಯಿಂದ ಸಿಗುವ ರಕ್ಷಣೆ ಪರಿಣಾಮಕಾರಿ. ಇದು ನೈಸರ್ಗಿಕ ಸೋಂಕಿಗಿಂತ ಹೆಚ್ಚು ಕಾಲ ನಿಮ್ಮ ದೇಹಕ್ಕೆ ರಕ್ಷಣೆ ನೀಡುತ್ತದೆ. ಹಾಗಾಗಿ ಎಲ್ಲರೂ ಲಸಿಕೆಯನ್ನ ಪಡೆಯಿರಿ‘‘ ಅಂತ ಫಹೀಮ್ ಯೂನಸ್ ಹೇಳಿದ್ದಾರೆ

The post ಕೋವಿಡ್​ ಸೋಂಕಿಗೀಡಾದವರು 1-3 ತಿಂಗಳಲ್ಲಿ ಲಸಿಕೆ ಪಡೆಯಿರಿ- ಅಮೆರಿಕಾದ ತಜ್ಞ ವೈದ್ಯರ ಕಿವಿಮಾತು appeared first on News First Kannada.

Source: newsfirstlive.com

Source link