ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಕೊರೊನಾ ಸೋಂಕಿತರ ಕುಟುಂಬಸ್ಥರಿಗೆ ವೈಯಕ್ತಿಕ ಸಾಲ ನೀಡುವುದಾಗಿ ತಿಳಿಸಿದೆ. ಈ ಕುರಿತು ಘೋಷಣೆ ಹೊರಡಿಸಿರುವ ಎಸ್​ಬಿಐ ಚೇರ್​ಮನ್ ದಿನೇಶ್​ ಖರ.. ಅಡಮಾನ ಮುಕ್ತವಾದ 5 ಲಕ್ಷ ಸಾಲವನ್ನ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್(ECLGS)ಯಲ್ಲಿ ನೀಡಲಾಗುವುದು ಎಂದಿದ್ದಾರೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕ್​ಗಳು 5 ಲಕ್ಷ ಭದ್ರತಾ ರಹಿತ ಸಾಲವನ್ನು ಸೋಂಕಿನಿಂದ ಸಂಕಷ್ಟಕ್ಕೊಳಗಾದವರಿಗೆ ನೀಡಲು ಮುಂದಾದ ಬೆನ್ನಲ್ಲೇ ಎಸ್​ಬಿಐ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ. ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ಎಸ್​​ಬಿಐ ಜಂಟಿ ಸುದ್ದಿಗೋಷ್ಠಿಯಲ್ಲಿ ಎಸ್​ಬಿಐ ಮುಖ್ಯಸ್ಥ ಈ ಘೋಷಣೆ ಮಾಡಿದ್ದಾರೆ. ಸಂಬಳ ಪಡೆಯುವ, ಸಂಬಳ ಪಡೆಯದ ಮತ್ತು ಪೆನ್ಷನ್ ಪಡೆಯುತ್ತಿರುವವರು ಸಹ ಈ ಸಾಲವನ್ನು ಪಡೆಯಬಹುದಾಗಿದೆ. 25,000 ದಿಂದ 5 ಲಕ್ಚದವರೆಗೆ ಕೋವಿಡ್ 19 ಚಿಕಿತ್ಸೆಗಾಗಿ ಈ ಸಾಲ ಪಡೆಯಬಹುದಾಗಿದ್ದು ಸಾಲ ಮರುಪಾವತಿ ಅವಧಿಯನ್ನ 5 ವರ್ಷಗಳ ಕಾಲ ನೀಡಲಾಗಿದೆ. ಈ ಸಾಲಕ್ಕೆ ವಾರ್ಷಿಕ 8.5% ಬಡ್ಡಿದರ ವಿಧಿಸಲಾಗುವುದು ಎಂದು ಹೇಳಿದೆ.

ಇನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕ್​ಗಳೂ ಸಹ ಸಾಲ ನೀಡುತ್ತಿದ್ದು ತಮ್ಮ ಬಡ್ಡಿದರವನ್ನು ತಿಳಿಸಿಲ್ಲ. ಇನ್ನು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮೂರು ಬಗೆಯ ಕಾರ್ಯಕ್ರಮಗಳ ಅಡಿಯಲ್ಲಿ ವ್ಯಾಕ್ಸಿನ್ ತಯಾರಕರು, ಆಸ್ಪತ್ರೆಗಳು, ಪ್ಯಾಥೋಲಜಿ ಲ್ಯಾಬ್ಸ್, ವೆಂಟಿಲೇಟರ್ಸ್, ವ್ಯಾಕ್ಸಿನ್ ಆಮದು ಮಾಡಿಕೊಳ್ಳುವವರು, ಕೋವಿಡ್ ಸಂಬಂಧಿತ ಔಷಧಿಗಳನ್ನು ಆಮದು ಮಾಡಿಕೊಳ್ಳುವವರು, ಲಾಜಿಸ್ಟಿಕ್ ಸಂಸ್ಥೆಗಳು ಹಾಗೂ ಕೋವಿಡ್​ನಿಂದ ಸೋಂಕಿಗೊಳಗಾದವರು ಲೋನ್ ಪಡೆಯಬಹುದು ಎಂದು ಹೇಳಿದೆ.

The post ಕೋವಿಡ್​ ಸೋಂಕಿನ ಚಿಕಿತ್ಸೆಗೆ 5 ಲಕ್ಷಗಳವರೆಗೆ ಅಡಮಾನ ರಹಿತ ಸಾಲ ಘೋಷಿಸಿದ SBI appeared first on News First Kannada.

Source: newsfirstlive.com

Source link