ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 3104 ಹೊಸ ಪಾಸಿಟಿವ್​​ ಕೇಸ್​​ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,59,595ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಇನ್ನು, ಸುಮಾರು 4992 ಸೋಂಕಿತರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇದರೊಂದಿಗೆ ಇದುವರೆಗೂ ರಾಜ್ಯದಲ್ಲಿ ಗುಣಮುಖರಾದವರ ಒಟ್ಟು ಸಂಖ್ಯೆ 2784030ಕ್ಕೆ ಆಗಿದೆ. ಒಂದೇ ದಿನ ಈ ಡೆಡ್ಲಿ ವೈರಸ್​ಗೆ 92 ಮಂದಿ ಬಲಿಯಾಗಿದ್ದು, ಇಲ್ಲಿಯತನಕ ಮೃತಪಟ್ಟವರ ಸಂಖ್ಯೆ 35526ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 40016 ಸಕ್ರಿಯ ಪ್ರಕರಣಗಳಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 715 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ಜತೆಗೆ 1863 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

The post ಕೋವಿಡ್​-19: ರಾಜ್ಯದಲ್ಲಿಂದು 3104 ಪಾಸಿಟಿವ್​​​ ಕೇಸ್ ಪತ್ತೆ​, 92 ಸಾವು appeared first on News First Kannada.

Source: newsfirstlive.com

Source link