ಜಮ್ಮು& ಕಾಶ್ಮೀರ: ಈ ವರ್ಷದ ಅಮರನಾಥ ಯಾತ್ರೆಯನ್ನ ಕೋವಿಡ್ ಹಿನ್ನೆಲೆ ರದ್ದು ಮಾಡಲಾಗಿದೆ. ಆದರೆ ಭಕ್ತರಿಗಾಗಿ ಆನ್​ಲೈನ್​ ಮೂಲಕ ಆರತಿ ನಡೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಘೋಷಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ನಡೆದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ.

ಅಮರನಾಥ ಯಾತ್ರೆ 56 ದಿನಗಳ ಯಾತ್ರೆಯಾಗಿದ್ದು 3,880 ಮೀಟರ್ ಎತ್ತರದಲ್ಲಿರುವ ಶಿವನ ದರ್ಶನ ಪಡೆಯಲು ಪ್ರತಿವರ್ಷ ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದರು. ಕಳೆದ ವಾರ ಯಾತ್ರೆಗೆ ಸಂಬಂಧಿಸಿದಂತೆ ಮನೋಜ್ ಸಿನ್ಹಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಉನ್ನತ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳು ಪಾಲ್ಗೊಂಡಿದ್ದರು.

The post ಕೋವಿಡ್ ಎಫೆಕ್ಟ್: ಈ ವರ್ಷದ ಪ್ರಸಿದ್ಧ ಅಮರನಾಥ ಯಾತ್ರೆ ರದ್ದು.. ಆದ್ರೆ ಇದಕ್ಕೆ ಅವಕಾಶವಿದೆ appeared first on News First Kannada.

Source: newsfirstlive.com

Source link