ಮೈಸೂರು: ಕೊರೊನಾ ಹಿನ್ನೆಲೆ ನಂಜುಂಡೇಶ್ವರನ ದೇವಾಲಯದಲ್ಲಿ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ನಡೆಯಿತು. 

ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಕಾಶೀಯಾತ್ರೆಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಎರಡು ವರ್ಷದಿಂದ ಕೊರೊನಾದಿಂದಾಗಿ ದೇವಾಲಯದ ಒಳಾವರಣದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. ಹೀಗಾಗಿ, ಸಂಪ್ರದಾಯ ಮುರಿಯಬಾರದೆಂಬ ಉದ್ದೇಶದಿಂದ ಸರಳವಾಗಿ ಆಚರಿಸುವಂತೆ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಸರಳ ಆಚರಣೆ ಆದರೂ ನಂಜುಂಡೇಶ್ವರ ಹಾಗೂ ಪಾರ್ವತಿದೇವಿಗೆ ವಜ್ರ ವೈಢೂರ್ಯಗಳಿಂದ ಸಿಂಗಾರ ಮಾಡಿದ್ದು, ಪ್ರಧಾನ ಅರ್ಚಕರಾದ  ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸಕಲ ಧಾರ್ಮಿಕ ಪೂಜಾ ಕೈಂಕರ್ಯ ನಡೆಯಿತು. ಶ್ರೀಕಂಠೇಶ್ವರಸ್ವಾಮಿ, ಪಾರ್ವತಿದೇವಿಗೆ ಮಾಲಾ ಧಾರಣೆ ಮಾಡಿಸುವ ಮೂಲಕ ಕಲ್ಯಾಣ ಮಹೋತ್ಸವ ನಡೆಯಿತು.

The post ಕೋವಿಡ್ ಎಫೆಕ್ಟ್: ನಂಜುಂಡೇಶ್ವರ ದೇವಾಲಯದಲ್ಲಿ ಸಿಂಪಲ್ಲಾಗಿ ನಡೀತು ‘ಗಿರಿಜಾ ಕಲ್ಯಾಣ’ appeared first on News First Kannada.

Source: newsfirstlive.com

Source link