ಚಿಕ್ಕಬಳ್ಳಾಪುರ: ಕೋವಿಡ್​ಗೆ ಕಡಿವಾಣ ಹಾಕಲು ಚಿಕ್ಕಬಳ್ಳಾಪುರ ಜಿಲ್ಲೆಯನ್ನ 4 ದಿನಗಳ ಕಾಲ ಸಂಪೂರ್ಣ ಬಂದ್ ಮಾಡುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಾತನಾಡಿದ ಡಿಸಿ ಆರ್ ಲತಾ.. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗ್ತಿದ್ದು.. ಮೇ 20 ರಿಂದ ಮೇ 23 ರವರೆಗೆ 4 ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಮಾಡಲಾಗುತ್ತಿದೆ ಎಂದಿದ್ದಾರೆ.

4 ದಿನಗಳ ಲಾಕ್​ಡೌನ್​ ಹೇಗಿರಲಿದೆ..?

  1. ಈ 4 ದಿನಗಳ ಕಾಲ ಅಗತ್ಯ ವಸ್ತುಗಳಾದ ದಿನಸಿ ಹಾಗೂ ತರಕಾರಿ ಅಂಗಡಿಗಳು ಸಹ ಸಂಪೂರ್ಣ ಬಂದ್ ಇರಲಿವೆ.
  2. 4 ದಿನಗಳ ಕಾಲ ಜಿಲ್ಲೆಯಲ್ಲಿ ಆಸ್ಪತ್ರೆ.. ಮೆಡಿಕಲ್ ಶಾಪ್ ತೆರೆದಿರುತ್ತವೆ.
  3. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಾಲಿನ ಬೂತ್, ಎರಡು ದಿನಗಳ ಕಾಲ ಚಿಂತಾಮಣಿ ನಗರದ ಟೊಮ್ಯಾಟೋ ಮಾರ್ಕೆಟ್ ಹಾಗೂ ಶಿಡ್ಲಘಟ್ಟ ನಗರದ ರೇಷ್ಮೆ ಗೂಡು ಮಾರುಕಟ್ಟೆ ಪ್ರತಿ ದಿನ 12 ಗಂಟೆಯವರೆಗ ಮಾತ್ರ ಕಾರ್ಯ ನಿರ್ವಹಿಸಲಿದೆ.
  4. ಹೈವೇಯಲ್ಲಿರುವ ಪೆಟ್ರೋಲ್ ಬಂಕ್ ಮಾತ್ರ ತೆರೆದಿರುತ್ತವೆ.

ಉಳಿದೆಲ್ಲವೂ ಕಂಪ್ಲೀಟ್ ಬಂದ್ ಆಗಲಿದ್ದು.. ಜಿಲ್ಲೆಯ ಜನ ಲಾಕ್ ಡೌನ್ ಗೆ ಸಹಕರಿಸಬೇಕಾಗಿ ಡಿಸಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯ ಪ್ರಯಾಣವನ್ನ ಸಹ‌‌ ನಿರ್ಬಂಧಿಸಿಲಾಗಿದೆ.

The post ಕೋವಿಡ್ ಕಡಿವಾಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ 4 ದಿನ ಕಂಪ್ಲೀಟ್ ಲಾಕ್​ಡೌನ್ appeared first on News First Kannada.

Source: newsfirstlive.com

Source link