ಕೋವಿಡ್ ಕೇರ್ ಸೆಂಟರ್‍ ಗೆ ಕನ್ನ ಹಾಕಿದ ಕಳ್ಳ – ಸಿಸಿಟಿವಿಯಲ್ಲಿ ಸೆರೆ

ಹುಬ್ಬಳ್ಳಿ: ಕೋವಿಡ್ ಕೇರ್ ಸೆಂಟರ್‍ ನಲ್ಲಿ ಕರ್ತವ್ಯ ನಿರತ ವೈದ್ಯರ ಮೊಬೈಲ್‍ನ್ನು ಕಳ್ಳತನ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ. ಕಳ್ಳನ ಕೈಚಳಕ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ತನ್ನ ಮೇಜಿನ ಮೇಲೆ ಮೊಬೈಲ್‍ನ್ನು ಇಟ್ಟು ರೋಗಿಗಳನ್ನು ವಿಚಾರಿಸುತ್ತಿದ್ದರು. ಈ ಸಮಯವನ್ನು ಬಳಸಿಕೊಂಡ ವ್ಯಕ್ತಿಯೋರ್ವ ಐವತ್ತು ಸಾವಿರ ಬೆಲೆಯುಳ್ಳ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕಳ್ಳತನ ಮಾಡಿರುವ ದೃಶ್ಯ ಹಾಗೂ ಕಳ್ಳನ ಸಂಪೂರ್ಣ ಚಲನವಲನ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಾಕಿ ಕಳ್ಳ ಅಟೆಂಡರ್ ಸೋಗಿನಲ್ಲಿ ಬಂದು ಮೊಬೈಲ್ ಕಳ್ಳತನ ಮಾಡಿರುವುದು ವರದಿಯಾಗಿದೆ.

ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾಗ ಮೊಬೈಲ್ ಎಗರಿಸಿದ ಕಳ್ಳನ ವಿರುದ್ಧ ವೈದ್ಯರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

The post ಕೋವಿಡ್ ಕೇರ್ ಸೆಂಟರ್‍ ಗೆ ಕನ್ನ ಹಾಕಿದ ಕಳ್ಳ – ಸಿಸಿಟಿವಿಯಲ್ಲಿ ಸೆರೆ appeared first on Public TV.

Source: publictv.in

Source link