ಕೋವಿಡ್ ಗಂಡಾಂತರದ ದೇಶಗಳಿಂದ ಬರುವ ಪ್ರಯಾಣಿಕರಿಗೆ ವ್ಯಾಕ್ಸಿನ್- ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಹೆಚ್ಒ ತಿಪ್ಪೇಸ್ವಾಮಿ | Vaccination and Corona negative report is compulsory for passengers says DHO thippeswamy


ಕೋವಿಡ್ ಗಂಡಾಂತರದ ದೇಶಗಳಿಂದ ಬರುವ ಪ್ರಯಾಣಿಕರಿಗೆ ವ್ಯಾಕ್ಸಿನ್- ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಹೆಚ್ಒ ತಿಪ್ಪೇಸ್ವಾಮಿ

ಡಿಹೆಚ್ಒ ತಿಪ್ಪೇಸ್ವಾಮಿ

ದೇವನಹಳ್ಳಿ: ಕೊರೊನಾ ರೂಪಾಂತರಿ ಒಮಿಕ್ರಾನ್ ಕರ್ನಾಟಕಕ್ಕೆ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಏರ್ಪೋರ್ಟ್ ಸಿಬ್ಬಂದಿ ಅಲರ್ಟ್ ಆಗಿ ಖಡಕ್ ತಪಾಸಣೆ ನಡೆಸುತ್ತಿದ್ದಾರೆ. ಅದರಲ್ಲೂ ಒಮಿಕ್ರಾನ್ ಅಬ್ಬರ ಹೆಚ್ಚಿರುವ ರಾಷ್ಟ್ರಗಳಿಂದ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿಡಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್ಒ ತಿಪ್ಪೇಸ್ವಾಮಿ ಈ ಬಗ್ಗೆ ಮಾತನಾಡಿದ್ದಾರೆ. ಹಿರಿಯ ಅಧಿಕಾರಿಗಳ‌ ಜೊತೆ ವಿಡಿಯೋ ಕಾನ್ಫರೆನ್ಸ್ ನಂತರ ಮಾತನಾಡಿದ ಡಿಹೆಚ್ಒ ತಿಪ್ಪೇಸ್ವಾಮಿ, ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಚೆಕ್ ಮಾಡ್ತೀವಿ ಎಂದಿದ್ದಾರೆ.

ನೆಗೆಟಿವ್ ರಿಪೋರ್ಟ್ ಇದ್ದರು ಮತ್ತೊಮ್ಮೆ ಇಲ್ಲಿ ಆರ್ಟಿಪಿಸಿಆರ್ ಟೆಸ್ಟಿಂಗ್ ಕಡ್ಡಾಯವಾಗಿ ಮಾಡಲಾಗುತ್ತೆ. ಟೆಸ್ಟಿಂಗ್ ನಂತರ ನೆಗೆಟಿವ್ ಬಂದ್ರೆ ಕಡ್ಡಾಯ 7 ದಿನಗಳ ಹೋಂ ಕ್ವಾರಂಟೈನ್‌ ಮಾಡಲಾಗುತ್ತೆ. ಈ ಬಗ್ಗೆ ಅವರು ವಾಸವಿರುವ ಸ್ಥಳದ ಅಧಿಕಾರಿಗಳು ನಿಗಾವಹಿಸುತ್ತಾರೆ. 7 ದಿನಗಳ ಕ್ವಾರಂಟೈನ್‌ ನಂತರ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತೆ. ಪಾಸಿಟಿವ್ ಬಂದ್ರೆ ನಿಗದಿತ ಆಸ್ವತ್ರೆಯಲ್ಲಿ ಐಸೋಲೇಷನ್ ಮಾಡಲಾಗುತ್ತೆ. ಈಗಾಗಲೆ 598 ಜನ ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ ಎಲ್ಲರ ಮೇಲೂ ನಿಗಾವಹಿಸಲಾಗಿದೆ. ಹೊಸ ಗೈಡ್ ಲೈನ್ಸ್ ಇಂದು ಅಥವಾ ನಾಳೆ ಬರುವ ಸಾಧ್ಯತೆಯಿದೆ ಎಂದರು.

ಇನ್ನು ಕೇರಳ ಮಹಾರಾಷ್ಟ್ರದಿಂದ ನೆಗೆಟಿವ್ ರಿಪೋರ್ಟ್ ಇಲ್ಲದೆ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿ ಉತ್ತರಿಸಿದ ಡಿಹೆಚ್ಒ ತಿಪ್ಪೇಸ್ವಾಮಿ, ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚೆಯಾಗಿದೆ, ನೆಗೆಟಿವ್ ರಿಪೋರ್ಟ್ ಇಲ್ಲದೆ ಪ್ರಯಾಣಿಕರನ್ನ ಕರೆತರಬಾರದು ಅಂತ ಈಗಾಗಲೆ ಏರ್ಲೈನ್ಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ನೆಗೆಟಿವ್ ರಿಪೋರ್ಟ್ ಇಲ್ಲದೆ ಯಾರು ಬರುವ ಹಾಗಿಲ್ಲ. ಆ ರೀತಿ ಬಂದ್ರೆ ಅವರಿಗೆ ಕಡ್ಡಾಯವಾಗಿ ಏರ್ಪೋಟ್ ನಲ್ಲಿ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತೆ ಎಂದು ಡಿಹೆಚ್ಒ ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಮಹಿಳಾ ತಂಡದ ಆರು ಆಟಗಾರ್ತಿಯರಿಗೆ ಕೊರೊನಾ ಸೋಂಕು; ವಿಶ್ವಕಪ್‌ ಅರ್ಹತಾ ಪಂದ್ಯ ರದ್ದು

TV9 Kannada


Leave a Reply

Your email address will not be published. Required fields are marked *