ಬೆಂಗಳೂರು: ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿನ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾಸಿಕ ಅಪಾಯ ಭತ್ಯೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್​ ಟ್ವೀಟ್ ಮಾಡಿ ಮಾಹಿತಿಯನ್ನ ನೀಡಿದ್ದಾರೆ. ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕ, ಲ್ಯಾಬ್ ತಂತ್ರಜ್ಞ, ಡೇಟಾ ಎಂಟ್ರಿ ಆಪರೇಟರ್​ಗಳಗೆ 5000 ರೂಪಾಯಿ, ದಾದಿಯರಿಗೆ 8000 ರೂಪಾಯಿ ಹಾಗೂ ಡಿ ಗ್ರೂಪ್ ನೌಕರರಿಗೆ 10,000 ರೂಪಾಯಿ ಮಾಸಿಕ ಅಪಾಯ ಭತ್ಯೆಯನ್ನ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

The post ಕೋವಿಡ್ ಟೆಸ್ಟ್​ ಲ್ಯಾಬ್​​ನಲ್ಲಿರುವ ಗುತ್ತಿಗೆ ನೌಕರರಿಗೆ ಸಿಹಿಸುದ್ದಿ; ಮಾಸಿಕ ಅಪಾಯ ಭತ್ಯೆ ಘೋಷಣೆ appeared first on News First Kannada.

Source: newsfirstlive.com

Source link