ಬೆಳಗಾವಿ: ಕೊರೊನಾ ದೂರವಾಗಲೆಂದು ಶಾಸಕ ಅಭಯ್ ಪಾಟೀಲ್ ಬೆಳಗಾವಿಯಲ್ಲಿ ಹೋಮ-ಹವನ ಮಾಡಿಸಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಗಲ್ಲಿಗಲ್ಲಿಯಲ್ಲಿ ಶಾಸಕರ ನೇತೃತ್ವದಲ್ಲಿ ಹೋಮ ನೆರವೇರಿಸಲಾಗಿದೆ. ವಾತಾವರಣ ಶುದ್ಧೀಕರಿಸಲು ಶಾಸಕರು ಈ ವಿನೂತನ ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರ್ಯ ಈಗ ಚರ್ಚೆಗೂ ಗ್ರಾಸವಾಗಿದೆ.

ಶಾಸಕರು ಹೋಮ ಮಾಡಿಸಿದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಹೋಮ ಮಾಡಿದರೆ ಕೊರೊನಾ ಹೋಗುತ್ತೆ ಅನ್ನೋದು ಅವೈಜ್ಞಾನಿಕ ಎಂದರು. ಬಿಜೆಪಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇದನ್ನೇ ಮಾಡಿದ್ದಾರೆ. ದಿಸ್ ಈಸ್ ಮೋಸ್ಟ್ ಕ್ರುಯೆಲ್ ಎಂದು ಹರಿಹಾಯ್ದರು.

The post ಕೋವಿಡ್ ದೂರವಾಗಲೆಂದು ಬೆಳಗಾವಿ ಗಲ್ಲಿಗಳಲ್ಲಿ ಹೋಮ-ಹವನ ಮಾಡಿಸಿದ ಶಾಸಕ appeared first on News First Kannada.

Source: newsfirstlive.com

Source link